ADVERTISEMENT

ಹಮಾಸ್‌ ಬಂಡುಕೋರರು ಅಲ್‌ ಖೈದಾಗಿಂತ ಕ್ರೂರಿಗಳು: ಜೋ ಬೈಡನ್‌

ಪಿಟಿಐ
Published 14 ಅಕ್ಟೋಬರ್ 2023, 4:11 IST
Last Updated 14 ಅಕ್ಟೋಬರ್ 2023, 4:11 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌: ಇಸ್ರೇಲ್‌ ಮೇಲೆ ದಾಳಿ ಮಾಡಿ ಸಾವಿರಾರು ಜನರ ಸಾವಿಗೆ ಕಾರಣವಾದ ಹಮಾಸ್‌ ಬಂಡುಕೋರರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಅಲ್ ಖೈದಾಗೆ ಹೋಲಿಕೆ ಮಾಡಿದ್ದಾರೆ.

ಹಮಾಸ್‌ ಬಂಡುಕೋರರು ಅಲ್‌ ಖೈದಾಕ್ಕಿಂತ ದುಷ್ಟರು ಎಂದು ಅವರು ಶುಕ್ರವಾರ ಹೇಳಿದ್ದಾರೆ.

‘ದಾಳಿಯ ಬಗ್ಗೆ ನಾವು ಹೆಚ್ಚು ತಿಳಿದುಕೊಂಡಂತೆ, ಹೆಚ್ಚು ಭಯಾನಕವಾಗುತ್ತಿದೆ. 27 ಅಮೆರಿಕನ್ನರು ಸೇರಿದಂತೆ ಸಾವಿರಕ್ಕೂ ಅಧಿಕ ಮುಗ್ದರು ಪ್ರಾಣ ಕಳೆದುಕೊಂಡಿದ್ದಾರೆ’ ಎಂದು ಫಿಲಡೆಲ್ಫಿಯದಲ್ಲಿ ಬೈಡನ್‌ ಹೇಳಿದ್ದಾರೆ.

ADVERTISEMENT

‘ಇವರು ಅಲ್‌ ಖೈದಾಗಿಂದ ಕ್ರೂರಿಗಳು. ಶುದ್ಧ ದುಷ್ಟರು. ನಾನು ಮೊದಲಿನಿಂದ ಹೇಳಿಕೊಂಡು ಬರುವಂತೆ, ಇಸ್ರೇಲ್‌ ಬೆಂಬಲಿಸುವ ಮೂಲಕ ಅಮೆರಿಕ ಯಾವುದೇ ತಪ್ಪು ಮಾಡಿಲ್ಲ. ಅಮೆರಿಕ ಇಸ್ರೇಲ್‌ ಜತೆ ನಿಲ್ಲಲಿದೆ’ ಎಂದು ನುಡಿದಿದ್ದಾರೆ.

ರಾಜ್ಯ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ನಿನ್ನೆ ಇಸ್ರೇಲ್‌ನಲ್ಲಿ ಇದ್ದರು. ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಅಸ್ಟಿನ್‌ ಅವರು ಇಂದು ಇಸ್ರೇಲ್‌ನಲ್ಲಿದ್ದಾರೆ’ ಎಂದು ಬೈಡನ್ ಹೇಳಿದ್ದಾರೆ.

ದಾಳಿಯಿಂದ ರಕ್ಷಣೆ ಪಡೆದುಕೊಳ್ಳಲು ಹಾಗೂ ಪ್ರತ್ಯುತ್ತರ ನೀಡಲು ಇಸ್ರೇಲ್‌ಗೆ ಅಗತ್ಯವಿರುವುದನ್ನು ನಾವು ಖಚಿತಪಡಿಸುತ್ತೇವೆ. ಅಲ್ಲದೆ ಗಾಜಾದಲ್ಲಿ ಮಾನವೀಯ ಬಿಕ್ಕಟ್ಟನ್ನು ತುರ್ತಾಗಿ ಪರಿಹರಿಸುವುದೂ ನಮ್ಮ ಆದ್ಯತೆಯಾಗಿದೆ ಎಂದಿದ್ದಾರೆ.

ಇಸ್ರೇಲ್‌ಗೆ ಸಹಾಯ ಮಾಡಲು ನನ್ನ ನಿರ್ದೇಶನದಂತೆ, ನನ್ನ ತಂಡ ಆ ಪ್ರದೇಶದಲ್ಲಿ ಕೆಲಸ ಮಾಡುತ್ತಿದೆ. ಇಸ್ರೇಲ್, ಈಜಿಪ್ಟ್‌, ಜೋರ್ಡನ್‌ ಹಾಗೂ ಇತರ ಅರಬ್‌ ದೇಶಗಳ ಸರ್ಕಾರ ಮತ್ತು ವಿಶ್ವಸಂಸ್ಥೆಯೊಂದಿಗೆ ಸಂಪರ್ಕದಲ್ಲಿದೆ ಎಂದು ಬೈಡನ್‌ ತಿಳಿಸಿದ್ದಾರೆ.

ಹಮಾಸ್ ಬಂಡುಕೋರರು ಒತ್ತೆಯಾಳಾಗಿರಿಸಿಕೊಂಡಿರುವ ಅಮೆರಿಕ ಪ್ರಜೆಗಳ ಬಿಡುಗಡೆಗೆ ನಾವು ಆಹೋರಾತ್ರಿ ಕೆಲಸ ಮಾಡುತ್ತಿದ್ದೇವೆ. ಇಸ್ರೇಲ್ ಹಾಗೂ ಆ ಪ್ರದೇಶದಲ್ಲಿರುವ ನಮ್ಮ ಪಾಲುದಾರರ ಸಹಾಯದೊಂದಿಗೆ, ಅವರನ್ನು ನಾವು ಮರಳಿ ಕರೆತರದೆ ವಿರಮಿಸುವುದಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.