ಸ್ವೀಡಾದಲ್ಲಿನ ಸಂಘರ್ಷ ನಿಯಂತ್ರಿಸಲು ಭದ್ರತಾ ಸಿಬ್ಬಂದಿ ನಿಯೋಜಿಸಿರುವ ಸಿರಿಯಾ ಸರ್ಕಾರ
ಡಮಾಸ್ಕಸ್: ಸಿರಿಯಾ ರಕ್ಷಣಾ ಸಚಿವಾಲಯದ ಬಳಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಬುಧವಾರ ತಿಳಿಸಿದೆ.
ಸರ್ಕಾರಿ ಪಡೆಗಳು ಹಾಗೂ ದುರೂಸ್ ಬಂಡುಕೋರ ಗುಂಪಿನ ನಡುವಿನ ಕದನ ವಿರಾಮ ಒಪ್ಪಂದವು ಮುರಿದುಬಿದ್ದಿದ್ದು, ಸಂಘರ್ಷ ತಾರಕಕ್ಕೇರಿದೆ.
ದಕ್ಷಿಣ ಸಿರಿಯಾದ ಸ್ವೀಡಾದಲ್ಲಿ ಘರ್ಷಣೆ ಮುಂದುವರಿದಿರುವುದಾಗಲೇ ಈ ದಾಳಿ ನಡೆದಿದ್ದು, ದುರೂಸ್ ಬಂಡುಕೋರರ ರಕ್ಷಣೆಗಾಗಿಯೇ ಇಸ್ರೇಲ್ ಈ ದಾಳಿ ನಡೆಸಿದೆ ಎನ್ನಲಾಗಿದೆ.
ಶಿಯಾ ಮುಸ್ಲಿಮರ ಶಾಖೆಯಾಗಿ ಹತ್ತನೇ ಶತಮಾನದಲ್ಲಿ ಉದಯವಾದ ದುರೂಸ್ ಪಂಥದ ಜನರು ಜಗತ್ತಿನಾದ್ಯಂತ 10 ಲಕ್ಷದಷ್ಟಿದ್ದಾರೆ. ಇದರಲ್ಲಿ ಅರ್ಧದಷ್ಟು ಮಂದಿ ಸಿರಿಯಾದ ವಾಸಿಗಳಾಗಿದ್ದಾರೆ.
ಗೋಲನ್ ಹೈಟ್ಸ್ ಸೇರಿದಂತೆ ಲೆಬನಾನ್ ಹಾಗೂ ಇಸ್ರೇಲ್‌ನಲ್ಲೂ ದುರೂಸ್ ಪಂಗಡದ ಜನರು ವಾಸಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.