ADVERTISEMENT

ಕದನ ವಿರಾಮದ ಬಳಿಕ ಗಾಜಾದ ಮೇಲೆ ಇಸ್ರೇಲ್‌ ದಾಳಿ: ಸಾವಿನ ಸಂಖ್ಯೆ 31ಕ್ಕೆ ಏರಿಕೆ

ಕದನ ವಿರಾಮದ ಬಳಿಕ ಗಾಜಾದ ಮೇಲೆ ಇಸ್ರೇಲ್‌ ದಾಳಿ

ಏಜೆನ್ಸೀಸ್
Published 20 ನವೆಂಬರ್ 2025, 15:43 IST
Last Updated 20 ನವೆಂಬರ್ 2025, 15:43 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ದೀರ್‌ ಅಲ್‌–ಬಲಾಹ್‌ (ಗಾಜಾ ಪಟ್ಟಿ): ಖಾನ್‌ ಯೂನಿಸ್‌ ಖಾನ್‌ ಪಟ್ಟಣದ ಮೇಲೆ ಇಸ್ರೇಲ್‌ ಸೇನೆಯು ಗುರುವಾರ ಬೆಳಿಗ್ಗೆ ನಡೆಸಿದ ವಾಯುದಾಳಿಗೆ ಮತ್ತೆ ಐದು ಮಂದಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ಯಾಲೆಸ್ಟೀನ್‌ ಪ್ರಾಂತ್ಯದಲ್ಲಿ ಕಳೆದ 12 ಗಂಟೆಗಳಲ್ಲಿ ನಡೆದ ವಾಯುದಾಳಿಗೆ ಮೃತಪಟ್ಟವರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ಅಕ್ಟೋಬರ್‌ 10ರಂದು ಕದನ ವಿರಾಮ ಏರ್ಪಟ್ಟ ಬಳಿಕ ಇಸ್ರೇಲ್ ನಡೆಸಿದ ಅತೀ ದೊಡ್ಡ ದಾಳಿ ಇದಾಗಿದೆ.

‘ಖಾನ್‌ ಯೂನಿಸ್‌ ಖಾನ್‌ ಪಟ್ಟಣದಲ್ಲಿ ನಮ್ಮ ಸೈನಿಕರ ಮೇಲೆ ದಾಳಿ ನಡೆದಿದ್ದು, ಯಾವುದೇ ಸೈನಿಕರು ಸತ್ತಿಲ್ಲ’ ಎಂದು ಇಸ್ರೇಲ್‌ ಸೇನೆ ತಿಳಿಸಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಇಸ್ರೇಲ್‌ ಸೇನೆಯು ವೈಮಾನಿಕ ದಾಳಿ ನಡೆಸಿತ್ತು.

ತಲಾ ಐದು ಮಂದಿ ಮಕ್ಕಳು, ಹೆಣ್ಣು ಮಕ್ಕಳು ಸೇರಿದಂತೆ 17 ಮೃತದೇಹಗಳನ್ನು ಸ್ವೀಕರಿಸಲಾಗಿದೆ ಎಂದು ಖಾನ್‌ ಯೂನಿಸ್‌ನ ನಾಸೀರ್ ಆಸ್ಪತ್ರೆಯು ತಿಳಿಸಿದೆ. ಎರಡು ವಾಯುದಾಳಿಗಳಲ್ಲಿ ಮೃತಪ‍ಟ್ಟ 7 ಮಂದಿ ಮಕ್ಕಳು ಸೇರಿದಂತೆ ಮೂವರು ಮಹಿಳೆಯರ ಮೃತದೇಹಗಳನ್ನು ಸ್ವೀಕರಿಸಲಾಗಿದೆ ಎಂದು ಅಲ್ ಶಿಫಾ ಆಸ್ಪತ್ರೆಯು ತಿಳಿಸಿದೆ.

ದಾಳಿ ಕುರಿತು ಕಿಡಿಕಾರಿರುವ ಬಂಡುಕೋರ ಸಂಘಟನೆ ಹಮಾಸ್‌, ‘ಆಘಾತಕಾರಿ ಹತ್ಯಾಕಾಂಡ’ ಎಂದು ತಿಳಿಸಿದ್ದು, ‘ಇಸ್ರೇಲ್‌ ಸೇನೆ ಮೇಲೆ ಯಾವುದೇ ದಾಳಿ ನಡೆಸಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.