ADVERTISEMENT

ಗಾಜಾಪಟ್ಟಿ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ

ಏಜೆನ್ಸೀಸ್
Published 2 ಜುಲೈ 2021, 9:24 IST
Last Updated 2 ಜುಲೈ 2021, 9:24 IST
ಗಾಜಾ ‍ಪಟ್ಟಿಯ ಮನೆಯೊಂದು ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಧ್ವಂಸಗೊಂಡಿದೆ. – ಎಎಫ್‌ಪಿ ಚಿತ್ರ
ಗಾಜಾ ‍ಪಟ್ಟಿಯ ಮನೆಯೊಂದು ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಧ್ವಂಸಗೊಂಡಿದೆ. – ಎಎಫ್‌ಪಿ ಚಿತ್ರ   

ಜೆರುಸಲೇಮ್‌: ಹಮಾಸ್‌ ಉಗ್ರ ಸಂಘಟನೆಯು ಇಸ್ರೇಲ್‌ನ ಗಡಿಭಾಗದಲ್ಲಿ ಕೃಷಿಕರು ನೆಲೆಸಿರುವ ಕೆಲ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಬಾಂಬ್‌ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಗಾಜಾಪಟ್ಟಿ ಮೇಲೆ ಯುದ್ಧವಿಮಾನಗಳಿಂದ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಮಿಲಿಟರಿ ಶುಕ್ರವಾರ ಹೇಳಿದೆ.

ಹಮಾಸ್‌ ಸಂಘಟನೆ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬಳಸುತ್ತಿದ್ದ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ವಾಯುದಾಳಿ ನಡೆಸಲಾಗಿದೆ ಎಂದೂ ಇಸ್ರೇಲ್‌ ಹೇಳಿದೆ.

ಹಮಾಸ್‌ ಬೆಂಬಲಿತ ಕಾರ್ಯಕರ್ತರು ಬಾಂಬ್‌ಗಳನ್ನು ತುಂಬಿದ್ದ ಬಲೂನ್‌ಗಳನ್ನು ಬಳಸಿ, ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಆಗಿರುವ ಹಾನಿಯ ಕುರಿತು ಹೆಚ್ಚಿನ ವಿವರಗಳು ಲಭ್ಯವಿಲ್ಲ ಎಂದೂ ಮಿಲಿಟರಿ ಹೇಳಿದೆ.

ADVERTISEMENT

ಮೇ ತಿಂಗಳಲ್ಲಿ ಹಮಾಸ್‌ ಉಗ್ರರು ಹಾಗೂ ಇಸ್ರೇಲ್‌ ಮಿಲಿಟರಿ ಮಧ್ಯೆ 11 ದಿನಗಳ ಕಾಲ ಸಂಘರ್ಷ ಏರ್ಪಟ್ಟಿತ್ತು. ನಂತರ, ಕದನ ವಿರಾಮ ಘೋಷಿಸಲಾಗಿತ್ತು.

ಇದಾದ ನಂತರ ಈಗ ಇಸ್ರೇಲ್‌ ಮಿಲಿಟರಿ ಗಾಜಾ ಪಟ್ಟಿ ಮೇಲೆ ನಡೆಸಿದ ಮೂರನೇ ದಾಳಿ ಇದಾಗಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.