ADVERTISEMENT

ಕೋವಿಡ್‌ ಲಸಿಕೆಯ 2ನೇ ಡೋಸ್‌ ಹಾಕಿಸಿಕೊಂಡ ಇಸ್ರೇಲ್‌ ಪ್ರಧಾನಿ

ಏಜೆನ್ಸೀಸ್
Published 10 ಜನವರಿ 2021, 5:45 IST
Last Updated 10 ಜನವರಿ 2021, 5:45 IST
ಕೋವಿಡ್‌ ಲಸಿಕೆಯ ಎರಡನೇ ಡೋಸ್‌ ಸ್ವೀಕರಿಸಿದ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೇತನ್ಯಾಹು
ಕೋವಿಡ್‌ ಲಸಿಕೆಯ ಎರಡನೇ ಡೋಸ್‌ ಸ್ವೀಕರಿಸಿದ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೇತನ್ಯಾಹು   

ಜೆರುಸಲೇಂ: ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶನಿವಾರ ಕೋವಿಡ್‌ ಲಸಿಕೆಯ ಎರಡನೇ ಡೋಸ್‌ ಹಾಕಿಸಿಕೊಂಡಿದ್ದಾರೆ.

‘ಈಗಾಗಲೇ ಇಸ್ರೇಲ್‌ನ ಶೇಕಡಾ 20 ರಷ್ಟು ಜನತೆಗೆ ಲಸಿಕೆಯ ಎರಡು ಡೋಸ್‌ ಅನ್ನು ನೀಡಲಾಗಿದೆ. ಮಾರ್ಚ್‌ ತಿಂಗಳೊಳಗೆ ದೇಶದ ಎ‌ಲ್ಲಾ ವಯಸ್ಕರಿಗೆ ಲಸಿಕೆಯ ಎರಡೂ ಡೋಸ್‌ಗಳನ್ನು ನೀಡಲಾಗುವುದು’ ಎಂದು ನೆತನ್ಯಾಹು ಅವರು ಶನಿವಾರ ತಿಳಿಸಿದರು.

ಸದ್ಯ ಇಸ್ರೇಲ್‌ನಲ್ಲಿ ಮೂರನೇ ಬಾರಿಗೆ ರಾಷ್ಟ್ರವ್ಯಾಪ್ತಿ ಲಾಕ್‌ಡೌನ್‌ ಹೇರಲಾಗಿದೆ. ಶಾಲಾ–ಕಾಲೇಜು ಮತ್ತು ಕಚೇರಿಗಳನ್ನು ಮುಚ್ಚಲಾಗಿದೆ. ಅಗತ್ಯ ಇದ್ದಲ್ಲಿ ಮಾತ್ರ ಮನೆಯಿಂದ ಹೊರ ಬರುವಂತೆ ಸೂಚಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.