ಎಲೆನಾ ಮರಗಾ
ಬೆಂಗಳೂರು: ಇಟಲಿಯ ಕ್ಯಾಥೊಲಿಕ್ ಶಾಲೆಯ ಶಿಕ್ಷಕಿಯೊಬ್ಬರು ಶಾಲೆ ನೀಡುವ ಸಂಬಳ ಸಾಕಾಗುವುದಿಲ್ಲ ಎಂದು ಅಡ್ಡದಾರಿ ತುಳಿದು ಸಂಕಷ್ಟಕ್ಕೆ ಈಡಾಗಿರುವ ಘಟನೆ ನಡೆದಿದೆ.
ರೋಮ್ ಹೊರವಲಯದ ನರ್ಸರಿ ಶಾಲೆಯ ಎಲೆನಾ ಮರಗಾ ಎನ್ನುವ ಶಿಕ್ಷಕಿ ತಮ್ಮ ನಗ್ನ ಚಿತ್ರಗಳನ್ನು, ವಿಡಿಯೊಗಳನ್ನು ಒನ್ಲಿ ಫ್ಯಾನ್ಸ್ ಎಂಬ ಹೆಸರಿನಲ್ಲಿ ಅಶ್ಲೀಲ ತಾಣಗಳಲ್ಲಿ ಒದಗಿಸುವ ಕೆಲಸಕ್ಕೆ ಇಳಿದಿದ್ದರು. ಇದು ಶಾಲೆಯ ಮಕ್ಕಳ ಕೆಲ ಪೋಷಕರಿಗೆ ಗೊತ್ತಾಗಿ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ.
ಸದ್ಯ ಎಲೆನಾ ಮರಗಾ ವಿಷಯ ಇಟಲಿಯ ಶಿಕ್ಷಣ ಸಚಿವಾಲಯದ ಮಟ್ಟಕ್ಕೂ ಹೋಗಿದ್ದು, ಇಟಲಿಯ ಶಾಲೆ–ಕಾಲೇಜುಗಳ ಶಿಕ್ಷಕರು ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಳ್ಳದಂತೆ ಕಾನೂನು ತರಲು ಮುಂದಾಗಿದೆ.
ಎಲೆನಾ ಮರಗಾ ಅವರ ಮೇಲೆ ತಕ್ಷಣಕ್ಕೆ ಶಾಲೆಯಿಂದ ಕ್ರಮ ಕೈಗೊಳ್ಳದಿದ್ದರೂ ಎಲೆನಾ ಅವರು ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ.
‘ನಾನು ನನ್ನ ಬಿಡುವಿನ ಸಮಯದಲ್ಲಿ ಈ ಕೆಲಸ ಮಾಡುತ್ತಿದ್ದೆ. ಅದರಿಂದ ನನ್ನ ಶಾಲೆ ನೀಡುವ ಸಂಬಳವನ್ನು ಒಂದೇ ದಿನದಲ್ಲಿ ಗಳಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಆದರೆ ನಾನು ಮಕ್ಕಳಿಗೆ ಕಲಿಸುವುದನ್ನು ಇಷ್ಟಪಡುತ್ತೇನೆ’ ಎಂದಿದ್ದಾರೆ.
ಎಲೆನಾ ಮರಗಾ ವಿಷಯ ಇಟಲಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಬಹು ಚರ್ಚಿತ ವಿಷಯವಾಗಿದೆ. ಕೆಲವರು ಎಲೆನಾ ನಿರ್ಧಾರ ಅವರ ಖಾಸಗಿ ಬದುಕಿಗೆ ಸಂಬಂಧಿಸಿದ್ದು ಎಂದರೆ ಇನ್ನೂ ಕೆಲವರು ಶಿಕ್ಷಕರಿಗೆ ನೈತಿಕತೆ ಇರಬೇಕಾಗುತ್ತದೆ ಎಂದಿದ್ದಾರೆ.
ಕಳೆದ ವರ್ಷ ಜರಾ ಧಾರಾ ಎನ್ನುವ ಯುಟ್ಯೂಬರ್ ಹಾಗೂ ಸಂಶೋಧಕಿ ತಮ್ಮ ಸಂಶೋಧನಾ ಕೆಲಸ ಬಿಟ್ಟು ‘ಒನ್ಲಿ ಫ್ಯಾನ್ಸ್’ಗೆ ಸೇರಿಕೊಂಡಿದ್ದರು. ಈ ಕುರಿತು ಎನ್‌ಡಿಟಿವಿ ವೆಬ್‌ಸೈಟ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.