ADVERTISEMENT

ಇದು ಕೊರೊನಾ ವೈರಸ್‌ ಅಲ್ಲ, ಚೀನಾ ವೈರಸ್‌: ಡೊನಾಲ್ಡ್‌ ಟ್ರಂಪ್

ಪಿಟಿಐ
Published 23 ಸೆಪ್ಟೆಂಬರ್ 2020, 6:13 IST
Last Updated 23 ಸೆಪ್ಟೆಂಬರ್ 2020, 6:13 IST
ಡೊನಾಲ್ಡ್‌ ಟ್ರಂಪ್‌ ಚುನಾವಣಾ  ರ್‍ಯಾಲಿ 
ಡೊನಾಲ್ಡ್‌ ಟ್ರಂಪ್‌ ಚುನಾವಣಾ  ರ್‍ಯಾಲಿ    

ವಾಷಿಂಗ್ಟನ್‌: ಲಕ್ಷಾಂತರ ಜನರ ಸಾವಿಗೆ ಕಾರಣವಾಗಿರುವ ಕೋವಿಡ್‌–19 ಅನ್ನು ‘ಚೀನಾ ವೈರಸ್‌’ ಎಂದೇ ಕರೆಯಬೇಕು ಎಂದು ಚೀನಾದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು,‘ಕೊರಾನಾ’ ಶಬ್ದವು ಇಟಲಿಯ ಸುಂದರ ಸ್ಥಳದ ಹೆಸರಿನಂತೆ ಭಾಸವಾಗುತ್ತದೆ ಎಂದಿದ್ದಾರೆ.

ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ‘ನಾನು ಮತ್ತೆ ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಯಾದರೆ, ಅಮೆರಿಕವನ್ನು ಉತ್ಪಾದನಾ ಕ್ಷೇತ್ರದಲ್ಲಿ ಮಹಾಶಕ್ತಿಯನ್ನಾಗಿ ಬೆಳೆಸುತ್ತೇನೆ. ಈ ಬಳಿಕ ಚೀನಾದ ಮೇಲೆ ಅಮೆರಿಕ ಅವಲಂಬಿತವಾಗುವ ಅವಶ್ಯಕತೆ ಇರುವುದಿಲ್ಲ’ ಎಂದು ಅವರು ಭರವಸೆ ನೀಡಿದರು.

‘ಕೋವಿಡ್–19‌‌ ಹರಡುವುದಕ್ಕಿಂತ ಮುನ್ನ ಅಮೆರಿಕದ ಆರ್ಥಿಕ ಪ್ರಗತಿ ಉತ್ತಮವಾಗಿತ್ತು. ಈ ವೈರಸ್‌ ಹರಡಲು ಚೀನಾವೇ ಕಾರಣ. ಇದು ಕೊರೊನಾ ವೈರಸ್‌ ಅಲ್ಲ, ಚೀನಾ ವೈರಸ್‌’ ಎಂದು ಅವರು ಕಿಡಿಕಾರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.