ADVERTISEMENT

ಇಂಡೊನೇಷ್ಯಾ: ಕಟ್ಟಡ ಕುಸಿತ, ಇಬ್ಬರಿಗೆ ಗಾಯ

ಏಜೆನ್ಸೀಸ್
Published 6 ಜನವರಿ 2020, 18:00 IST
Last Updated 6 ಜನವರಿ 2020, 18:00 IST
ಕುಸಿದ ಕಟ್ಟಡ – ಎಎಫ್‌ಪಿ ಚಿತ್ರ
ಕುಸಿದ ಕಟ್ಟಡ – ಎಎಫ್‌ಪಿ ಚಿತ್ರ   

ಜಕಾರ್ತ, ಇಂಡೊನೇಷ್ಯಾ: ಐದು ಅಂತಸ್ತುಗಳಬಹುಮಹಡಿ ಕಟ್ಟಡ ಕುಸಿದ ಪರಿಣಾಮ ಕನಿಷ್ಠ ಇಬ್ಬರು ಗಾಯಗೊಂಡಿರುವ ಘಟನೆಪಶ್ಚಿಮ ಜಕಾರ್ತದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ‌

ಕಟ್ಟಡವು ವಸತಿ ಪ್ರದೇಶಕ್ಕೆ ಹೊಂದಿಕೊಂಡಿತ್ತು. ಆದರೆ, ಇದುಮುಖ್ಯರಸ್ತೆ ಮೇಲೆ ಕಟ್ಟಡ ಕುಸಿದಿದೆ. ಇದರಿಂದ ಹೆಚ್ಚಿನ ಸಾವು– ನೋವು ತಪ್ಪಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡದ ಅವಶೇಷಗಳಲ್ಲಿ ಇನ್ನು ಹಲವು ಮಂದಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದರೆ,ರಾಷ್ಟ್ರೀಯ ರಕ್ಷಣಾ ಪಡೆಯು ಮೂವರು ಎಂದು ಹೇಳಿದೆ. ಇದಕ್ಕೆ ವ್ಯತಿರಿಕ್ತವಾಗಿ ಸ್ಥಳೀಯ ಮಾಧ್ಯಮಗಳು 8 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಮಾಡಿವೆ.

ADVERTISEMENT

ಕಳೆದ ವಾರವಷ್ಟೇ ಬಹುಮಹಡಿ ಕಟ್ಟಡ ಕುಸಿದು 60 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.