ADVERTISEMENT

ಟೋಕಿಯೊದಲ್ಲಿ 2008ರಲ್ಲಿ 7 ಜನರನ್ನು ಕೊಂದಿದ್ದ ಅಪರಾಧಿಗೆ ಗಲ್ಲು ಶಿಕ್ಷೆ

ಏಜೆನ್ಸೀಸ್
Published 26 ಜುಲೈ 2022, 13:30 IST
Last Updated 26 ಜುಲೈ 2022, 13:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಟೋಕಿಯೊ: 2008ರಲ್ಲಿ ವಾಹನ ಅಪಘಾತ ಮತ್ತು ಚೂರಿ ಇರಿತದ ಮೂಲದ 7 ಜನರನ್ನು ಕೊಂದಿದ್ದ ಅಪರಾಧಿಗೆ ಜಪಾನ್‌ ಮಂಗಳವಾರ ಗಲ್ಲು ಶಿಕ್ಷೆ ಜಾರಿಗೊಳಿಸಿದೆ.

ದೋಷಿ ಟೊಮೊಹಿರೊ ಕಾಟೊನನ್ನು ಟೊಕಿಯೊ ಕಾರಾಗೃಹ ಕೇಂದ್ರದಲ್ಲಿ ಗಲ್ಲಿಗೇರಿಸಲಾಯಿತು ಎಂದು ಕಾನೂನು ಸಚಿವ ಯೊಶಿಹಿಸ ಫುರುಕವಾ ಅವರು ತಿಳಿಸಿದ್ದಾರೆ.

2008ರಲ್ಲಿ ಕಾಟೊ ಅಕಿಹಬರ ಎಲೆಕ್ಟ್ರಾನಿಕ್ ಶಾಪಿಂಗ್‌ ಪ್ರದೇಶದಲ್ಲಿ ಟ್ರಕ್‌ ಹರಿಸಿ ಮೂವರು ಪಾದಾಚಾರಿಗಳನ್ನು ಕೊಂದಿದ್ದ. ನಂತರ ಚೂರಿ ಇರಿದು ನಾಲ್ವರನ್ನು ಹತ್ಯೆ ಮಾಡಿದ್ದ. ಈತನಿಗೆ 2011ರಲ್ಲಿ ಟೊಕಿಯೊ ಜಿಲ್ಲಾ ಕೋರ್ಟ್‌ ಮರಣದಂಡನೆ ವಿಧಿಸಿತ್ತು. 2015ರಲ್ಲಿ ಸುಪ್ರೀಂಕೋರ್ಟ್‌ ಕಾಟೊ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿತ್ತು.ಜಾಗತಿಕ ವಿರೋಧದ ಹೊರತಾಗಿಯೂ ಜಪಾನ್ ಮರಣದಂಡಣೆ ಶಿಕ್ಷೆಯನ್ನು ಜಾರಿಗೊಳಿಸುವ ತನ್ನ ಹಕ್ಕನ್ನು ಉಳಿಸಿಕೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.