ADVERTISEMENT

ಜಪಾನ್‌: 12 ವರ್ಷ ಮೇಲ್ಪಟ್ಟವರಿಗೂ ಫೈಜರ್ ಲಸಿಕೆ

ರಾಯಿಟರ್ಸ್
Published 28 ಮೇ 2021, 9:51 IST
Last Updated 28 ಮೇ 2021, 9:51 IST
.
.   

ಟೋಕಿಯೊ: ಕೋವಿಡ್‌–19 ವಿರುದ್ಧದ ಫೈಜರ್ ಲಸಿಕೆಯನ್ನು 12 ವರ್ಷ ಮೇಲ್ಪಟ್ಟವರಿಗೆ ನೀಡಲು ಜಪಾನ್‌ ಆರೋಗ್ಯ ಸಚಿವಾಲಯದ ಸಮಿತಿ ಅನುಮೋದನೆ ನೀಡಿದೆ.

ಇದುವರೆಗೆ 16 ವರ್ಷದ ಮೇಲ್ಪಟ್ಟವರಿಗೆ ಜಪಾನ್‌ನಲ್ಲಿ ಲಸಿಕೆ ನೀಡಲಾಗುತ್ತಿತ್ತು. ಅಮೆರಿಕ ಮತ್ತು ಇತರ ರಾಷ್ಟ್ರಗಳಲ್ಲಿ ಈ ಲಸಿಕೆಗೆ ಅನುಮೋದನೆ ನೀಡಿರುವುದನ್ನು ಪರಿಗಣಿಸಿ ಸಮಿತಿ ಈ ನಿರ್ಧಾರ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮಕ್ಕಳಿಗೆ ಆದಷ್ಟು ಬೇಗ ಲಸಿಕೆ ಹಾಕಬೇಕೆಂದು ನಾನು ಬಯಸುತ್ತೇನೆ, ಆದ್ದರಿಂದ ವ್ಯವಸ್ಥೆಯನ್ನು ಸರಾಗಗೊಳಿಸುವಂತೆ ಸ್ಥಳೀಯ ಸರ್ಕಾರಗಳನ್ನು ಕೇಳಲು ನಾನು ಬಯಸುತ್ತೇನೆ’ ಎಂದು ಆರೋಗ್ಯ ಸಚಿವನೊರಿಹಿಸಾ ತಮುರಾ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.