ADVERTISEMENT

ಅಬೆ ಸಾವಿಗೆ ಅಸಮರ್ಪಕ ಪೊಲೀಸ್‌ ರಕ್ಷಣೆ ಕಾರಣ: ಜಪಾನ್‌ ಪ್ರಧಾನಿ

ಏಜೆನ್ಸೀಸ್
Published 14 ಜುಲೈ 2022, 16:09 IST
Last Updated 14 ಜುಲೈ 2022, 16:09 IST
ಫುಮಿಯೊ ಕಿಶಿಡಾ
ಫುಮಿಯೊ ಕಿಶಿಡಾ   

ಟೊಕಿಯೊ: ಜಪಾನ್‌ನ ಮಾಜಿ ಪ್ರಧಾನಿ ಮತ್ತು ಅಲ್ಲಿನ ಅತ್ಯಂತ ಪ್ರಭಾವಿ ನಾಯಕ ಶಿಂಜೊ ಅಬೆಅವರ ಸಾವಿಗೆ ಅಸಮರ್ಪಕಪೊಲೀಸ್‌ರಕ್ಷಣೆಯೇ ಕಾರಣ ಎಂದುಜಪಾನ್‌ನ ಪ್ರಧಾನಿ ಫುಮಿಯೊ ಕಿಶಿಡಾ ಅವರು ದೂರಿದ್ದಾರೆ.

ಕಳೆದ ಶುಕ್ರವಾರ ಅಬೆ ಅವರ ಹತ್ಯೆ ನಡೆದಿತ್ತು. ಕಡಿಮೆ ಅಪರಾಧ ಪ್ರಮಾಣ ಇರುವ ಜಪಾನ್‌ನಲ್ಲಿ ನಡೆದ ಈ ಕೃತ್ಯ ಜಾಗತಿಕವಾಗಿ ಹಲವರನ್ನು ಬೆಚ್ಚಿಬೀಳಿಸಿತ್ತು. ಗುಂಡಿನ ದಾಳಿ ನಡೆಸಿದ ಶಂಕಿತ ಬಂದೂಕುಧಾರಿ ತೆತ್ಸುಯ ಯಮಾಗಾಮಿ, ಅಬೆ ಅವರ ಸಮೀಪದಲ್ಲಿಯೇ ಇದ್ದಿದ್ದು ವಿಡಿಯೊ ಮತ್ತು ಚಿತ್ರಗಳಿಂದ ಗೊತ್ತಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT