ADVERTISEMENT

ಜಪಾನ್‌: ಜನಸಂಖ್ಯೆ ಕುಸಿತ

ನೆಲೆ ಕಂಡುಕೊಂಡ ವಿದೇಶಿಯರ ಸಂಖ್ಯೆ ಹೆಚ್ಚಳ

ಎಪಿ
Published 26 ಜುಲೈ 2023, 13:00 IST
Last Updated 26 ಜುಲೈ 2023, 13:00 IST
-
-   

ಟೋಕಿಯೊ (ಜಪಾನ್): ಜಪಾನ್‌ನ ಎಲ್ಲ 47 ಪ್ರಾಂತ್ಯಗಳ ಜನಸಂಖ್ಯೆಯಲ್ಲಿ ದಾಖಲೆಯ ಇಳಿಕೆ ಕಂಡುಬಂದಿದೆ. ಇನ್ನೊಂದೆಡೆ ದೇಶದಲ್ಲಿ ನೆಲೆ ಕಂಡುಕೊಂಡಿರುವ ವಿದೇಶಿಯರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ.

ಸರ್ಕಾರ ಬುಧವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶಗಳನ್ನು ವಿವರಿಸಲಾಗಿದ್ದು, ದೇಶದಲ್ಲಿ ನೆಲೆಸಿರುವ ವಿದೇಶಿಯರ ಸಂಖ್ಯೆ 30 ಲಕ್ಷದ ಗಡಿ ತಲುಪಿದೆ ಎಂದು ಹೇಳಲಾಗಿದೆ.

ಪ್ರತಿ ವರ್ಷವೂ ಜನಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ. ಕಳೆದ ವರ್ಷ ಜಪಾನೀಯರ ಜನಸಂಖ್ಯೆ 12.24 ಕೋಟಿ ಇತ್ತು. ಅಂದರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಜನಸಂಖ್ಯೆಯಲ್ಲಿ 8 ಲಕ್ಷ ಅಥವಾ ಶೇ 0.65ರಷ್ಟು ಕುಸಿತವಾಗಿದೆ. ಇದರೊಂದಿಗೆ ಸತತ 14ನೇ ವರ್ಷವೂ ಜನಸಂಖ್ಯೆಯಲ್ಲಿ ಇಳಿಕೆ ಕಂಡುಬಂದಂತಾಗಿದೆ ಎಂದು ಆಂತರಿಕ ವ್ಯವಹಾರಗಳು ಮತ್ತು ಸಂವಹನ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯಲ್ಲಿ ವಿವರಿಸಲಾಗಿದೆ.

ADVERTISEMENT

ಜಪಾನ್‌ನಲ್ಲಿ ನೆಲೆಸಿರುವ ವಿದೇಶಿಯರ ಜನಸಂಖ್ಯೆಯಲ್ಲಿ ಶೇ 10.7ರಷ್ಟು ಹೆಚ್ಚಳವಾಗಿದೆ. 2008ರ ನಂತರ ದೇಶದ ಜನಸಂಖ್ಯೆ ಕುಸಿಯುತ್ತಾ ಸಾಗಿದ್ದು, ಜನನ ಪ್ರಮಾಣದಲ್ಲಿನ ಇಳಿಕೆಯೇ ಇದಕ್ಕೆ ಕಾರಣ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.