ADVERTISEMENT

ಜಪಾನ್‌: ಗುಪ್ತಚರ ಮಾಹಿತಿ ನೀಡುವ ಉಪಗ್ರಹ ಉಡಾವಣೆ

ಏಜೆನ್ಸೀಸ್
Published 12 ಜನವರಿ 2024, 12:15 IST
Last Updated 12 ಜನವರಿ 2024, 12:15 IST
<div class="paragraphs"><p>ಗುಪ್ತಚರ ಮಾಹಿತಿಯನ್ನು ಒದಗಿಸುವ ಉಪಗ್ರಹಗಳನ್ನು ಒಳಗೊಂಡ ರಾಕೆಟ್‌ ಅನ್ನು ಜಪಾನ್ ಶುಕ್ರವಾರ&nbsp; ಯಶಸ್ವಿಯಾಗಿ&nbsp;ಉಡಾವಣೆ ಮಾಡಿತು</p></div>

ಗುಪ್ತಚರ ಮಾಹಿತಿಯನ್ನು ಒದಗಿಸುವ ಉಪಗ್ರಹಗಳನ್ನು ಒಳಗೊಂಡ ರಾಕೆಟ್‌ ಅನ್ನು ಜಪಾನ್ ಶುಕ್ರವಾರ  ಯಶಸ್ವಿಯಾಗಿ ಉಡಾವಣೆ ಮಾಡಿತು

   

–ಪಿಟಿಐ ಚಿತ್ರ

ಟೋಕಿಯೊ: ಗುಪ್ತಚರ ಮಾಹಿತಿಯನ್ನು ಒದಗಿಸುವ ಉಪಗ್ರಹವನ್ನು ಒಳಗೊಂಡ ರಾಕೆಟ್‌ ಅನ್ನು ಜಪಾನ್ ಶುಕ್ರವಾರ ಯಶಸ್ವಿಯಾಗಿ ಉಡಾವಣೆ ಮಾಡಿತು. ಉತ್ತರ ಕೊರಿಯಾದ ಸೇನಾ ನೆಲೆಗಳ ಚಲನವಲನಗಳ ಮೇಲೆ ನಿಗಾ ಇಡಲು ಹಾಗೂ ನೈಸರ್ಗಿಕ ವಿಕೋಪ ತಡೆಗೆ ಕ್ರಮ ರೂಪಿಸುವ ಉದ್ದೇಶದಿಂದ ಈ ಉಪಗ್ರಹವನ್ನು ನಭಕ್ಕೆ ಕಳುಹಿಸಿದೆ. 

ADVERTISEMENT

ಮಿತ್ಸುಬಿಶಿ ಹೆವಿ ಇಂಡಸ್ಟ್ರೀಸ್‌ ಲಿಮಿಡೆಟ್‌, ತನೆಗಾಶಿಮಾ ಬಾಹ್ಯಾಕಾಶ ಕೇಂದ್ರದಿಂದ ಎಚ್‌2ಎ ರಾಕೆಟ್‌ ಮೂಲಕ ಉಪಗ್ರಹವನ್ನು ಅಂತರಿಕ್ಷಕ್ಕೆ ಕಳುಹಿಸಿತು.

ಆಪ್ಟಿಕಲ್‌–8 ಉಪಗ್ರಹವು ರಾಕೆಟ್‌ನಿಂದ ಯಶಸ್ವಿಯಾಗಿ ಪ್ರತ್ಯೇಕಗೊಂಡು ನಿಯೋಜಿತ ಕಕ್ಷೆ ಸೇರಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಪ್ರತಿಕೂಲ ಹವಾಮಾನದಲ್ಲಿ ಕಾರ್ಯನಿರ್ವಹಿಸುವ ಮಿತಿಗಳಿದ್ದರೂ ಉಪಗ್ರಹವು ಸ್ಪಷ್ಟ ಚಿತ್ರಗಳನ್ನು ಭೂಮಿಗೆ ರವಾನಿಸಲಿದೆ.

1998ರಲ್ಲಿ ಉತ್ತರ ಕೊರಿಯಾವು ಜಪಾನ್‌ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದಾಗಿನಿಂದ ಜಪಾನ್‌ ಗುಪ್ತಚರ ಮಾಹಿತಿ ನೀಡುವ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.