ADVERTISEMENT

ಜೆಫ್ರಿ ಎಪ್‌ಸ್ಟೈನ್‌ ಜತೆ ಸಂಪರ್ಕ: ಬ್ರಿಟನ್ ಮಾಜಿ ರಾಜಕುಮಾರ ಆ್ಯಂಡ್ರೂ ಬಂಧನ

ಏಜೆನ್ಸೀಸ್
Published 19 ಫೆಬ್ರುವರಿ 2026, 10:59 IST
Last Updated 19 ಫೆಬ್ರುವರಿ 2026, 10:59 IST
<div class="paragraphs"><p>ಆ್ಯಂಡ್ರೂ ಮೌಂಟ್‌ಬ್ಯಾಟನ್ ವಿಂಡ್ಸರ್ ಮತ್ತು&nbsp;ಜೆಫ್ರಿ ಎಪ್‌ಸ್ಟೈನ್‌</p></div>

ಆ್ಯಂಡ್ರೂ ಮೌಂಟ್‌ಬ್ಯಾಟನ್ ವಿಂಡ್ಸರ್ ಮತ್ತು ಜೆಫ್ರಿ ಎಪ್‌ಸ್ಟೈನ್‌

   

–ರಾಯಿಟರ್ಸ್ ಚಿತ್ರಗಳು

ಲಂಡನ್: ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್‌ ಅವರೊಂದಿಗೆ ಸಂಪರ್ಕ ಹೊಂದಿದ್ದು, ಸಾರ್ವಜನಿಕ ಕಚೇರಿಯಲ್ಲಿ ನಡೆದಿದೆ ಎನ್ನಲಾದ ದುಷ್ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಬ್ರಿಟನ್ ಮಾಜಿ ರಾಜಕುಮಾರ ಆ್ಯಂಡ್ರೂ ಮೌಂಟ್‌ಬ್ಯಾಟನ್ ವಿಂಡ್ಸರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ADVERTISEMENT

66 ವರ್ಷದ ಆ್ಯಂಡ್ರೂ ಮೌಂಟ್‌ಬ್ಯಾಟನ್ ವಿಂಡ್ಸರ್ ಅವರು ಕಿಂಗ್‌ ಚಾರ್ಲ್ಸ್‌ –3 ಅವರ ಕಿರಿಯ ಸಹೋದರರಾಗಿದ್ದಾರೆ.

ಎಪ್‌ಸ್ಟೈನ್‌ ಫೈಲ್ಸ್‌ನಲ್ಲಿ ಮಹಿಳೆಯೊಂದಿಗೆ ಒಳಉಡುಪಿನಲ್ಲಿರುವ ಚಿತ್ರ ಬಹಿರಂಗಗೊಂಡಿದ್ದರಿಂದ ಇಂಗ್ಲೆಂಡ್‌ನ ಹೌಸ್ ಆಫ್ ಲಾರ್ಡ್ಸ್ (ಮೇಲ್ಮನೆ) ಸದಸ್ಯ ಸ್ಥಾನಕ್ಕೆ ಪೀಟರ್ ಮ್ಯಾಂಡೆಲ್‌ಸನ್ ರಾಜೀನಾಮೆ ನೀಡಿದರೆ, ಮಹಿಳೆಯೊಂದಿಗೆ ಅನುಚಿತ ಸ್ಥಿತಿಯಲ್ಲಿರುವ ಚಿತ್ರ ಹೊರಗೆ ಬಂದಿದ್ದರಿಂದ ಬ್ರಿಟನ್‌ನ ಬಕಿಂಗ್‌ಹ್ಯಾಮ್ ಅರಮನೆಯಿಂದ ಆ್ಯಂಡ್ರೂ ಅವರನ್ನು ಹೊರಹಾಕಲಾಗಿದೆ. ಎಪ್‌ಸ್ಟೈನ್‌ನೊಂದಿಗೆ ಮಹಿಳೆಯರ ಬಗ್ಗೆ ಚಾಟ್ ಮಾಡಿದ್ದಕ್ಕೆ ಸ್ಲೊವಾಕಿಯಾದ ವಿದೇಶಾಂಗ ಸಚಿವ ಮೀರೊಸ್ಲಾವ್ ಲಾಜಾಕ್ ಪದವಿ ತೊರೆದಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್, ನಾರ್ವೆಯ ನೊಬೆಲ್ ಸಮಿತಿ ಮಾಜಿ ಅಧ್ಯಕ್ಷ ತೂರಬ್‌ಯರ್ನ್ ಯಾಕ್‌ಲ್ಹಂಡ್, ಉದ್ಯಮಿ ಸ್ಟೀವ್ ಟಿಶ್, ಮೈಕೆಲ್ ಜಾಕ್ಸನ್, ಗೂಗಲ್‌ ಸಹ ಸಂಸ್ಥಾಪಕ ಸರ್ಗೆ ಬ್ರಿನ್, ಪತ್ರಕರ್ತ ಕೇಟಿ ಕೊರಿಕ್, ನಿರ್ದೇಶಕರಾದ ವೂಡಿ ಅಲೆನ್, ಮೀರಾ ನಾಯರ್, ಅನುರಾಗ್ ಕಶ್ಯಪ್, ಟ್ರಂಪ್ ಆಪ್ತ ಸ್ಟೀವ್ ಬ್ಯಾನನ್, ಲೇಖಕ ದೀಪಕ್ ಚೋಪ್ರಾ ಹೀಗೆ ವಿವಿಧ ದೇಶಗಳ ಖ್ಯಾತನಾಮರ ಹೆಸರು ಫೈಲ್ಸ್‌ನಲ್ಲಿದೆ ಬಹಿರಂಗಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.