ADVERTISEMENT

ಪುಟಿನ್‌ ಯುದ್ಧಾಪರಾಧಿ: ಬೈಡನ್‌ ಹೇಳಿಕೆ ಅಕ್ಷಮ್ಯವೆಂದ ರಷ್ಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮಾರ್ಚ್ 2022, 2:49 IST
Last Updated 17 ಮಾರ್ಚ್ 2022, 2:49 IST
ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌
ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌   

ಕ್ರೆಮ್ಲಿನ್‌: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು 'ಯುದ್ಧಾಪರಾಧಿ' ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕರೆದಿದ್ದಾರೆ. ಈ ಹೇಳಿಕೆಯನ್ನು ರಷ್ಯಾ ಖಂಡಿಸಿದೆ. ರಷ್ಯಾದ ಭದ್ರತೆಗಾಗಿ ಯೋಜನೆಯಂತೇ ನಡೆಯುತ್ತಿರುವುದಾಗಿ ಸ್ಪಷ್ಟನೆ ನೀಡಿದೆ.

'ಬೈಡನ್‌ ಹೇಳಿಕೆಯು ಸ್ವೀಕಾರಾರ್ಹವಲ್ಲ ಮತ್ತು ಅಕ್ಷಮ್ಯ' ಎಂದು ರಷ್ಯಾ ವಕ್ತಾರ ಡಿಮಿಟ್ರಿ ಪೆಸ್‌ಕೋವ್‌ ಪ್ರತಿಕ್ರಿಯಿಸಿದ್ದಾರೆ ಎಂದು ರಷ್ಯಾದ ಪ್ರಮುಖ ಸುದ್ದಿಸಂಸ್ಥೆ 'ಟಾಸ್‌ ನ್ಯೂಸ್‌ ಏಜೆನ್ಸಿ' ವರದಿ ಮಾಡಿದೆ.

ಶ್ವೇತಭವನದಲ್ಲಿ ಬುಧವಾರ ಮಾಧ್ಯಮದ ಪ್ರಶ್ನೆಗೆ ಉತ್ತರಿಸುವ ವೇಳೆ ಬೈಡನ್‌, 'ನನ್ನ ಪ್ರಕಾರ ಆತ(ಪುಟಿನ್‌) ಯುದ್ಧಾ‍ಪರಾಧಿ' ಎಂದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.