ADVERTISEMENT

ಅಧ್ಯಕ್ಷನಾಗಿ ಆಯ್ಕೆಯಾದಲ್ಲಿ ಕೋವಿಡ್‌ ಲಸಿಕೆ ಉಚಿತ ವಿತರಣೆ: ಜೊ ಬೈಡನ್‌

ಪಿಟಿಐ
Published 24 ಅಕ್ಟೋಬರ್ 2020, 9:59 IST
Last Updated 24 ಅಕ್ಟೋಬರ್ 2020, 9:59 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌: ‘ನಾನು ಅಧ್ಯಕ್ಷನಾಗಿ ಆಯ್ಕೆಯಾದಲ್ಲಿ ಎಲ್ಲಾ ಅಮೆರಿಕನ್ನರಿಗೆ ಕೋವಿಡ್‌–19 ಲಸಿಕೆಯನ್ನು ಉಚಿತವಾಗಿ ನೀಡಲು ಕ್ರಮ ಕೈಗೊಳ್ಳುವೆ’ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೊ ಬೈಡನ್‌ ಅವರು ಭರವಸೆ ನೀಡಿದ್ದಾರೆ.

ಅವರು ತಮ್ಮ ತವರು ರಾಜ್ಯ ಡೆಲವೇರ್‌ನಲ್ಲಿ ಶುಕ್ರವಾರ ಕೊರೊನಾ ನಿಯಂತ್ರಣ ನೀತಿ ಬಗ್ಗೆ ಮಾತನಾಡಿದರು.

‘ಕೋವಿಡ್‌ ಲಸಿಕೆ ಲಭಿಸಿದ ಕೂಡಲೇ ಉಚಿತ ವಿತರಣೆಗಾಗಿ ಬೃಹತ್‌ ಪ್ರಮಾಣದಲ್ಲಿ ಲಸಿಕೆ ಖರೀದಿಗೆ ಆದೇಶಿಸುವೆ. ವಿಮೆ ಇಲ್ಲದವರಿಗೂ ಉಚಿತವಾಗಿ ಲಸಿಕೆ ವಿತರಣೆ ಮಾಡಲು ಬೇಕಾಗುವಷ್ಟು ಲಸಿಕೆಯನ್ನು ಖರೀದಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

‘ಕೊರೊನಾ ವೈರಸ್‌ ಅನ್ನು ನಿಯಂತ್ರಿಸಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅನುಸರಿಸಿದ ನೀತಿ ದೇಶದ ಆರ್ಥಿಕತೆ ಮೇಲೆ ಭೀಕರ ಪರಿಣಾಮ ಬೀರಿದೆ’ ಎಂದು ದೂರಿದರು.

‘ಕೊರೊನಾ ಸೋಂಕು ಕಡಿಮೆಯಾಗುತ್ತಿದೆ. ನಮ್ಮಿಂದ ದೂರ ಹೋಗುತ್ತಿದೆ. ನಾವು ಅದರೊಂದಿಗೆ ಬದುಕಲು ಕಲಿಯಬೇಕು ಎಂದು ಟ್ರಂಪ್‌ ಸದಾ ಹೇಳುತ್ತಿರುತ್ತಾರೆ. ಆದರೆ ಚಳಿಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ನಾವು ಕೊರೊನಾ ಸೋಂಕಿನೊಂದಿಗೆ ಬದುಕಲು ಕಲಿಯುವ ಬದಲು, ಸಾಯಲು ಕಲಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.