ADVERTISEMENT

ಆಫ್ಗಾನ್‌ನಿಂದ ಸೇನೆ ಹಿಂತೆಗೆತ ತಾರ್ಕಿಕ ಮತ್ತು ಸರಿಯಾದ ನಿರ್ಧಾರ: ಬೈಡನ್

ಪಿಟಿಐ
Published 23 ಆಗಸ್ಟ್ 2021, 3:05 IST
Last Updated 23 ಆಗಸ್ಟ್ 2021, 3:05 IST
ಅಮೆರಿಕ ಅಧ್ಯಕ್ಷ ಜೋ ಬೈಡನ್: ಎಎಫ್‌ಪಿ ಚಿತ್ರ
ಅಮೆರಿಕ ಅಧ್ಯಕ್ಷ ಜೋ ಬೈಡನ್: ಎಎಫ್‌ಪಿ ಚಿತ್ರ   

ವಾಷಿಂಗ್ಟನ್: ಅಫ್ಗಾನಿಸ್ತಾನದಲ್ಲಿ ಬಿಕ್ಕಟ್ಟಿನ ನಡುವೆ ಸೇನೆಯನ್ನು ಹಿಂತೆಗೆದುಕೊಂಡ ತನ್ನ ಕ್ರಮವನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಮರ್ಥಿಸಿಕೊಂಡಿದ್ದಾರೆ. ಇದು ‘ತಾರ್ಕಿಕ, ವೈಚಾರಿಕಮತ್ತು ಸರಿಯಾದ ನಿರ್ಧಾರ’ ಎಂದು ಇತಿಹಾಸದಲ್ಲಿ ದಾಖಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಅಮೆರಿಕ ತನ್ನ ಪಡೆಗಳನ್ನು ವಾಪಸ್ ಕರೆದುಕೊಳ್ಳಲು ಆರಂಭಿಸಿದ ಬಳಿಕ ತಾಲಿಬಾನ್ ುಗ್ರರು ದೇಶವನ್ನು ಆಕ್ರಮಿಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಅಲ್ಲಿ ಆತಂಕಕಾರಿ ವಾತಾವರಣ ನಿರ್ಮಾಣವಾಗಿದ್ದು, ಹಲವರು ಸಾವನ್ನಪ್ಪಿದ್ದಾರೆ. ಹಾಗಾಗಿ, ಅಮೆರಿಕದ ನಿರ್ಧಾರವನ್ನು ಹಲವರು ಟೀಕಿಸಿದ್ದರು. ಆದರೆ, ಈಗಲೂ ಬೈಡನ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

‘ಇತಿಹಾಸವು ಈ ತಾರ್ಕಿಕ, ತರ್ಕಬದ್ಧ ಮತ್ತು ಸರಿಯಾದ ನಿರ್ಧಾರವನ್ನು ದಾಖಲಿಸಲಿದೆ ಎಂದು ನಾನು ಭಾವಿಸುತ್ತೇನೆ‘ಎಂದು ಅವರು ಶ್ವೇತಭವನದಲ್ಲಿ ನಡೆದ ಸಂವಾದದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ ಜನರನ್ನು ವಾಪಸ್ ಕರೆಸಿಕೊಳ್ಳುವ ಮೊದಲು ನಮ್ಮ ಸೇನೆಯನ್ನು ಕರೆಸಿಕೊಳ್ಳುವ ಮೂಲಕ ನಮ್ಮ ಜನರನ್ನು ಅವರಿಗೆ ಸರೆಂಡರ್ ಮಾಡಲಾಗಿದೆ. ನಮ್ಮ ಆಫ್ಗಾನ್ ಮಿತ್ರರನ್ನು ಕೈಬಿಟ್ಟಿದ್ದಾರೆ ಇದು ಸಂಪೂರ್ಣ ಮತ್ತು ಮಜುಗರ ತರುವ ವೈಫಲ್ಯ’ಎಂದು ಭಾರತೀಯ-ಅಮೆರಿಕನ್ ರಾಜಕಾರಣಿ ಮತ್ತು ವಿಶ್ವಸಂಸ್ಥೆಯ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಅವರು ಟೀಕಿಸಿದ್ದರು.

ತಾಲಿಬಾನಿಗಳು ಮೂಲಭೂತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬೈಡನ್ ಹೇಳಿದ್ದಾರೆ. ‘ಈ ಹಿಂದೆ ಯಾವುದೇ ಸಂಘಟನೆ ಮಾಡದ, ಆಫ್ಗಾನ್ ಜನರ ಯೋಗಕ್ಷೇಮದ ರಕ್ಷಣೆ ಮತ್ತು ಒಗ್ಗೂಡಿಸುವಿಕೆಯತ್ತ ತಾಲಿಬಾನ್ ಮುಂದಾಗಲಿದೆಯೇ? ಎಂದು ಬೈಡನ್ ಪ್ರಶ್ನಿಸಿದ್ದಾರೆ.

ಒಂದೊಮ್ಮೆ ತಾಲಿಬಾನ್ ಅದನ್ನು ಮಾಡಿದರೆ ಅವರಿಗೆ ಎಲ್ಲ ರೀತಿಯ ನೆರವು ಬೇಕಾಗುತ್ತದೆ ಎಂದು ಬೈಡನ್ ಹೇಳಿದ್ದಾರೆ.

ತಾಲಿಬಾನಿಗಳು ಇಲ್ಲಿಯವರೆಗೆ ಅಮೆರಿಕ ಪಡೆಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದರು.

‘ಅವರು ನಮ್ಮ ಪಡೆಗಳನ್ನು ನಿಯಂತ್ರಿಸುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಅವರು ಅದನ್ನು ಮುಂದುವರಿಸುತ್ತಾರೋ ಇಲ್ಲವೋ ಎಂಬುದನ್ನು ನಾವು ಕಾದು ನೋಡುತ್ತೇವೆ. ಅವರು ಹೇಳುವುದು ಸತ್ಯವಾಗಿದೆಯೋ ಇಲ್ಲವೋ ಎಂದು ನಾವು ನೋಡುತ್ತೇವೆ’ಎಂದು ಬೈಡನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.