ADVERTISEMENT

ಪತ್ರಕರ್ತನ ಬಿಡುಗಡೆ ಮಾಡಲು ರಷ್ಯಾಗೆ ಜೋ ಬೈಡನ್‌ ಆಗ್ರಹ

ಏಜೆನ್ಸೀಸ್
Published 31 ಮಾರ್ಚ್ 2023, 14:46 IST
Last Updated 31 ಮಾರ್ಚ್ 2023, 14:46 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌: ‘ವಾಲ್‌ ಸ್ಟ್ರೀಟ್‌ ಜರ್ನಲ್‌’ ಪತ್ರಕರ್ತ ಇವಾನ್‌ ಗೆರ್ಶ್‌ಕೋವಿಚ್‌ ಅವರನ್ನು ಬಿಡುಗಡೆ ಮಾಡುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಶುಕ್ರವಾರ ರಷ್ಯಾವನ್ನು ಆಗ್ರಹಿಸಿದ್ದಾರೆ.

ಬೇಹುಗಾರಿಕೆ ಆರೋಪದ ಮೇಲೆ ರಷ್ಯಾದ ಭದ್ರತಾ ಸೇವೆ ಇವಾನ್‌ ಅವರನ್ನು ಬಂಧಿಸಿದೆ. ಆದರೆ ಪತ್ರಿಕೆಯು ಆರೋಪವನ್ನು ತಳ್ಳಿಹಾಕಿದೆ.

ಶ್ವೇತಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಬೈಡನ್‌, ‘ಅವರನ್ನು ಬಿಡಿ’ ಎಂದು ಹೇಳಿದರು.

ADVERTISEMENT

ರಷ್ಯಾದ ರಾಜತಾಂತ್ರಿಕ ಅಧಿಕಾರಿಗಳು ಅಥವಾ ಪತ್ರಕರ್ತರನ್ನು ಅಮೆರಿಕದಿಂದ ಹೊರಹಾಕುತ್ತೀರಾ ಎಂಬ ಪ್ರಶ್ನೆಗೆ ‘ಸದ್ಯಕ್ಕೆ ಅಂಥ ಯೋಚನೆ ಇಲ್ಲ’ ಎಂದು ತಿಳಿಸಿದರು.

ಬೇಹುಗಾರಿಕೆ ಆರೋಪದ ಮೇಲೆ ಅಮೆರಿಕ ಪತ್ರಕರ್ತರೊಬ್ಬರನ್ನು ಬಂಧಿಸಿರುವುದು ಶೀತಲ ಸಮರದ ನಂತರ ಇದೇ ಮೊದಲು.

ಈ ಮಧ್ಯೆ ರಷ್ಯಾಗೆ ಪ್ರವಾಸ ಕೈಗೊಳ್ಳದಂತೆ ಹಾಗೂ ರಷ್ಯಾದಲ್ಲಿ ಇರುವವರು ಕೂಡಲೇ ಅಲ್ಲಿಂದ ಹೊರಡುವಂತೆ ಅಮೆರಿಕ ತನ್ನ ಪ್ರಜೆಗಳಿಗೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.