ADVERTISEMENT

ಅಮೆರಿಕ ಅಧ್ಯಕ್ಷೀಯ ಚುನಾವಣೆ| ಪೊರ್ಟೊರಿಕೊದಲ್ಲಿ ಬಿಡೆನ್‌ಗೆ ಗೆಲುವು

ಏಜೆನ್ಸೀಸ್
Published 13 ಜುಲೈ 2020, 5:49 IST
Last Updated 13 ಜುಲೈ 2020, 5:49 IST
ಜೊ ಬಿಡೆನ್‌
ಜೊ ಬಿಡೆನ್‌   

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿಯ ಆಯ್ಕೆಗಾಗಿ ಪೊರ್ಟೊರಿಕೊದಲ್ಲಿ ಭಾನುವಾರ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಜೊ ಬಿಡೆನ್‌ ಗೆಲುವು ಸಾಧಿಸಿದ್ದಾರೆ. ಅವರ ವಿರುದ್ಧ ಏಳು ಮಂದಿ ಸ್ಪರ್ಧೆಯಲ್ಲಿದ್ದರು.

ಪಕ್ಷದ ಅಭ್ಯರ್ಥಿಯಾಗಲು ಬೇಕಾದಷ್ಟು ಮತಗಳನ್ನು ಬಿಡೆನ್‌ ಅವರು ಈಗಾಗಲೇ ಪಡೆದಾಗಿದೆ. ಪೊರ್ಟೊರಿಕೊದಲ್ಲಿ ಪ್ರಾಥಮಿಕ ಚುನಾವಣೆಗಳು ಮಾರ್ಚ್‌ ತಿಂಗಳಲ್ಲಿ ನಡೆಯಬೇಕಾಗಿದ್ದವು. ಆದರೆ ಕೊರೊನಾ ವೈರಸ್‌ ಕಾರಣದಿಂದಾಗಿ ಅವುಗಳನ್ನು ಮುಂದೂಡಲಾಗಿತ್ತು.

ಪೊರ್ಟೊರಿಕೊ ಜನರು ಅಮೆರಿಕದ ನಾಗರಿಕರು. ಆದರೆ, ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಮತ ಚಲಾಯಿಸಲು ಅವರಿಗೆ ಅವಕಾಶ ಇರುವುದಿಲ್ಲ. ಆದರೂ ಡೆಮಾಕ್ರೆಟ್‌ ಹಾಗೂ ರಿಪಬ್ಲಿಕನ್‌ ಪಕ್ಷದವರು ತಮ್ಮ ರಾಜಕೀಯ ಸಮಾವೇಶಗಳಿಗೆ ಇಲ್ಲಿನ ಜನರನ್ನು ಆಹ್ವಾನಿಸುತ್ತಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.