ADVERTISEMENT

ಎಡ್ವರ್ಡ್ ಮಾರ್ಕಿ ವಿರುದ್ಧ ಜೊ ಕೆನಡಿಗೆ ಸೋಲು

ಏಜೆನ್ಸೀಸ್
Published 2 ಸೆಪ್ಟೆಂಬರ್ 2020, 6:42 IST
Last Updated 2 ಸೆಪ್ಟೆಂಬರ್ 2020, 6:42 IST
ಡೆಮಾಕ್ರಟಿಕ್ ಸೆನೆಟ್ ಪ್ರಾಥಮಿಕ ಸದಸ್ಯತ್ವಕ್ಕೆ ನಡೆದ ಆಯ್ಕೆಯಲ್ಲಿ ಅಮೆರಿಕದ ಪ್ರತಿನಿಧಿ ಜೊ ಕೆನಡಿ III ವಿರುದ್ಧ ಜಯಗಳಿಸಿದ ಅಮೆರಿಕದ ಸೆನಟರ್ ಎಡ್ವರ್ಡ್ ಮಾರ್ಕಿ ಮತ್ತು ಪತ್ನಿ ಸುಸಾನ್ ಅವರೊಂದಿಗೆ ವಿಜಯದ ಸೂಚನೆ ತೋರಿದರು.
ಡೆಮಾಕ್ರಟಿಕ್ ಸೆನೆಟ್ ಪ್ರಾಥಮಿಕ ಸದಸ್ಯತ್ವಕ್ಕೆ ನಡೆದ ಆಯ್ಕೆಯಲ್ಲಿ ಅಮೆರಿಕದ ಪ್ರತಿನಿಧಿ ಜೊ ಕೆನಡಿ III ವಿರುದ್ಧ ಜಯಗಳಿಸಿದ ಅಮೆರಿಕದ ಸೆನಟರ್ ಎಡ್ವರ್ಡ್ ಮಾರ್ಕಿ ಮತ್ತು ಪತ್ನಿ ಸುಸಾನ್ ಅವರೊಂದಿಗೆ ವಿಜಯದ ಸೂಚನೆ ತೋರಿದರು.   

ಬೋಸ್ಟನ್: ಅಮೆರಿಕದ ಡೆಮಾಕ್ರಟಿಕ್‌ ಸೆನೆಟ್ ಪ್ರಾಥಮಿಕ ಸದಸ್ಯತ್ವಕ್ಕಾಗಿ ಮಂಗಳವಾರ ನಡೆದ ಆಯ್ಕೆಯಲ್ಲಿ ಅಮೆರಿಕದ ಸೆನಟರ್ ಎಡ್ವರ್ಡ್ ಮಾರ್ಕಿನ್ ವಿರುದ್ಧ ಅಮೆರಿಕದ ಪ್ರತಿನಿಧಿ ಜೊ ಕೆನಡಿ-3 ಸೋತಿದ್ದಾರೆ.

ಈ ಮೂಲಕ ಮಾರ್ಕಿ ಅವರು ಮುಂದಿನ ಆರು ವರ್ಷಗಳವರೆಗೆ ಅಮೆರಿಕದ ಚುನಾವಣೆ ಸಂಭಾವ್ಯ ಅಭ್ಯರ್ಥಿಯಾಗುವುದಕ್ಕಾಗಿ ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ.

ಈ ಗೆಲುವು, ವಂಶಪಾರಂಪರ್ಯ ರಾಜಕೀಯ ಕುಟುಂಬದ ಯುವ ಪೀಳಿಗೆಗೆ ಅಧಿಕಾರ ನೀಡುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿರುವುದಾಗಿ ವಿಶ್ಲೇಷಿಸಲಾಗುತ್ತಿದೆ. ಅಂದಹಾಗೆ, ಸೋಲುಂಡಿರುವ ಜೊ ಕೆನಡಿ-3 ಅವರು ಅಮೆರಿಕದ ಹಿರಿಯ ರಾಜಕಾರಣಿ‌ ರಾಬರ್ಟ್‌ ಎಫ್‌. ಕೆನಡಿ ಅವರ ಮೊಮ್ಮಗ.

ADVERTISEMENT

ಈ ಚುನಾವಣೆಯ ಪ್ರಚಾರದ ವೇಳೆ 74 ವರ್ಷದ ಮಾರ್ಕಿ ಅವರು ಡೆಮಾಕ್ರಟಿಕ್ ಪಾರ್ಟಿಯ ಉದಾರವಾದಿ ವಿಭಾಗದಸದಸ್ಯರಾಗಿದ್ದರು. ಇವರು ‘ಗ್ರೀನ್ ನ್ಯೂ ಡೀಲ್’ ಕುರಿತು ನ್ಯೂಯಾರ್ಕ್‌ ಪ್ರತಿನಿಧಿ ಅಲೆಕ್ಸಾಂಡ್ರಿಯಾ ಒಕಾಸಿಒ–ಕಾರ್ಟೆಜ್ ಅವರೊಂದಿಗೆ ಕೈಜೋಡಿಸಿದ್ದರು. 39 ವರ್ಷದ ಕೆನಡಿ ಅವರಿಗಿದ್ದಿದ್ದು ‘ಪ್ರಗತಿಪರ’ಎಂಬ ಹೆಸರು ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.