ADVERTISEMENT

ಪಾಕ್: 'ಮೋಸ್ಟ್ ವಾಂಟೆಡ್' ಖಾಲಿಸ್ತಾನ ಭಯೋತ್ಪಾದಕ ಲಖ್ಬೀರ್ ಹೃದಯಾಘಾತದಿಂದ ಸಾವು

ಪಿಟಿಐ
Published 5 ಡಿಸೆಂಬರ್ 2023, 7:46 IST
Last Updated 5 ಡಿಸೆಂಬರ್ 2023, 7:46 IST
<div class="paragraphs"><p>ಖಾಲಿಸ್ತಾನ</p></div>

ಖಾಲಿಸ್ತಾನ

   

(ರಾಯಿಟರ್ಸ್ ಚಿತ್ರ)

ನವದೆಹಲಿ: ಪಾಕಿಸ್ತಾನದಲ್ಲಿ ಖಾಲಿಸ್ತಾನ ಭಯೋತ್ಪಾದಕ ಲಖ್ಬೀರ್ ಸಿಂಗ್ ರೋಡ್ ಹೃದಯಾಘಾತದಿಂದ ಸಾವಿಗೀಡಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಲಖ್ಬೀರ್ ಸಿಂಗ್, ಭಾರತದ 'ಮೋಸ್ಟ್ ವಾಂಟೆಡ್' ಪಟ್ಟಿಯಲ್ಲಿದ್ದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.

ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್‍ವಾಲೆ ಸೋದರಳಿಯ ಲಖ್ಬೀರ್ ಸಿಂಗ್, ಇಂಟರ್‌ನ್ಯಾಷನಲ್ ಸಿಖ್ ಯೂತ್ ಫೆಡರೇಷನ್ ಮುಖ್ಯಸ್ಥರೂ ಆಗಿದ್ದರು.

ಖಾಲಿಸ್ತಾನ ಪ್ರತ್ಯೇಕವಾದಿ ಚಳವಳಿಯಲ್ಲಿ ರೂವಾರಿ ಎನಿಸಿರುವ ಲಖ್ಬೀರ್ ಸಿಂಗ್, ಭಿಂದ್ರನ್‍ವಾಲೆ ಸಾವಿನ ಬಳಿಕ ಪಾಕಿಸ್ತಾನಕ್ಕೆ ಓಡಿ ಹೋಗಿ ಲಾಹೋರ್‌ನಲ್ಲಿ ನೆಲೆಸಿದ್ದನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.