ADVERTISEMENT

ಟ್ರಂಪ್ ಕನಸು ಕಾಣುತ್ತಿರಲಿ.. ಇರಾನ್‌ನ ಪರಮೋಚ್ಛ ನಾಯಕ ಖಮೇನಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 14:45 IST
Last Updated 20 ಅಕ್ಟೋಬರ್ 2025, 14:45 IST
ಆಯತುಲ್ಲಾ ಅಲಿ ಖಮೇನಿ
ಆಯತುಲ್ಲಾ ಅಲಿ ಖಮೇನಿ   

ದುಬೈ: ಇರಾನ್‌ನ ಪರಮಾಣು ಸಾಮರ್ಥ್ಯವನ್ನು ಅಮೆರಿಕ ಧ್ವಂಸಗೊಳಿಸಿದೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಪ್ರತಿಪಾದನೆಯನ್ನು ಇರಾನ್‌ನ ಪರಮೋಚ್ಛ ನಾಯಕ ಆಯತುಲ್ಲಾ ಅಲಿ ಖಮೇನಿ ಶುಕ್ರವಾರ ತಳ್ಳಿಹಾಕಿದ್ದಾರೆ.

‘ಇರಾನ್‌ನ ಪರಮಾಣು ಕೈಗಾರಿಕೆಯನ್ನು ನಾವು ಸ್ಫೋಟಿಸಿದ್ದೇವೆ ಮತ್ತು ನಾಶಗೊಳಿಸಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಅಹಂಕಾರದಿಂದ ಹೇಳುತ್ತಿದ್ದಾರೆ. ಸಂತೋಷ, ಅವರು ಆ ಕನಸು ಕಾಣುತ್ತಲೇ ಇರಲಿ’ ಎಂದು ‘ಎಕ್ಸ್‌’ನಲ್ಲಿ ಖಮಿನೇನಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT