ADVERTISEMENT

ಉತ್ತರ ಕೊರಿಯಾ: ಆಹಾರ ಕೊರತೆ ಬಗ್ಗೆ ಎಚ್ಚರಿಕೆ ನೀಡಿದ ಕಿಮ್ ಜೋಂಗ್ ಉನ್

ಕೋವಿಡ್‌ ಲಾಕ್‌ಡೌನ್ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 6:52 IST
Last Updated 16 ಜೂನ್ 2021, 6:52 IST
ಕಿಮ್ ಜೋಂಗ್ ಉನ್
ಕಿಮ್ ಜೋಂಗ್ ಉನ್   

ಸೋಲ್‌: ಕೋವಿಡ್‌, ಚಂಡಮಾರುತ ಮತ್ತು ಪ್ರವಾಹದಿಂದಾಗಿ ದೇಶದಲ್ಲಿ ಆಹಾರ ಕೊರತೆಯಾಗುವ ಸಾಧ್ಯತೆ ಇದೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜೋಂಗ್ ಉನ್ ಎಚ್ಚರಿಕೆ ನೀಡಿದ್ದಾರೆ.

ಅಣ್ವಸ್ತ್ರ ಮತ್ತು ಕ್ಷಿಪಣಿ ಯೋಜನೆಗಳಿಂದಾಗಿ ಹಲವು ದೇಶಗಳು ವಿಧಿಸಿರುವ ನಿರ್ಬಂಧದಿಂದಾಗಿ ಉತ್ತರ ಕೊರಿಯಾ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು.

ಈಗ ಸಾಂಕ್ರಾಮಿಕ ರೋಗದ ಕಾರಣದಿಂದ ದೇಶದ ಗಡಿಗಳನ್ನು ಮುಚ್ಚಿದ್ದರಿಂದ ಉತ್ತರ ಕೊರಿಯಾದ ಆರ್ಥಿಕತೆಯು ಮತ್ತಷ್ಟು ಕ್ಷೀಣಿಸಿದೆ. ಇದು ಚೀನಾದೊಂದಿಗಿನ ವ್ಯಾಪಾರವನ್ನು ಸ್ಥಗಿತಗೊಳಿಸಿದೆ. ಜತೆಗೆ, ಕಳೆದ ಬೇಸಿಗೆಯಲ್ಲಿ ವಿನಾಶಕಾರಿ ಚಂಡಮಾರುತ ಮತ್ತು ಪ್ರವಾಹಗಳು ಬೆಳೆಗಳನ್ನು ನಾಶಪಡಿಸಿವೆ.

ADVERTISEMENT

ಉತ್ತರ ಕೊರಿಯಾ ಆಡಳಿತಾರೂಢ ವರ್ಕರ್ಸ್‌ ಪಾರ್ಟಿ ಆಫ್‌ ಕೊರಿಯಾದ ಕೇಂದ್ರೀಯ ಸಮಿತಿ ಸಭೆಯಲ್ಲಿ ಮಾತನಾಡಿರುವ ಕಿಮ್‌, ‘ಈ ವರ್ಷ ಆರ್ಥಿಕತೆ ಸುಧಾರಿಸಿತ್ತು. ಆದರೆ, ಹಲವಾರು ಸವಾಲುಗಳನ್ನು ಎದುರಿಸಬೇಕಾಗಿದೆ. ಕೃಷಿ ವಲಯ ಸಂಪೂರ್ಣ ವಿಫಲವಾಗಿದೆ. ಕಳೆದ ವರ್ಷದ ಚಂಡಮಾರುತದಿಂದ ನಿರೀಕ್ಷಿಸಿದಂತೆ ಆಹಾರ ಧಾನ್ಯಗಳ ಉತ್ಪಾದನೆಯಾಗಿಲ್ಲ’ ಎಂದು ಹೇಳಿದ್ದಾರೆ.

ಕೋವಿಡ್‌–19 ನಿರ್ಬಂಧಗಳನ್ನು ವಿಸ್ತರಿಸುವರಿಂದ ಜನರು ಸಹ ಮುಂಜಾಗ್ರತವಾಗಿ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.