ADVERTISEMENT

ಲಂಡನ್‌: ಗುರುನಾನಕ್ ಗುರುದ್ವಾರ ಉದ್ಘಾಟಿಸಿದ ರಾಜ ಚಾರ್ಲ್ಸ್

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 14:29 IST
Last Updated 7 ಡಿಸೆಂಬರ್ 2022, 14:29 IST
ಲಂಡನ್‌ನ ಲುಟನ್‌ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗುರುನಾನಕ್ ಗುರುದ್ವಾರವನ್ನು ಉದ್ಘಾಟಿಸಿದ ಬ್ರಿಟನ್ ರಾಜ 3ನೇ ಚಾರ್ಲ್ಸ್‌ ಅವರು ಸಮುದಾಯದ ಮುಖಂಡರೊಂದಿಗೆ ಕುಳಿತು ಕೀರ್ತನೆಗಳನ್ನು ಆಲಿಸಿದರು. –ಪಿಟಿಐ ಚಿತ್ರ
ಲಂಡನ್‌ನ ಲುಟನ್‌ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗುರುನಾನಕ್ ಗುರುದ್ವಾರವನ್ನು ಉದ್ಘಾಟಿಸಿದ ಬ್ರಿಟನ್ ರಾಜ 3ನೇ ಚಾರ್ಲ್ಸ್‌ ಅವರು ಸಮುದಾಯದ ಮುಖಂಡರೊಂದಿಗೆ ಕುಳಿತು ಕೀರ್ತನೆಗಳನ್ನು ಆಲಿಸಿದರು. –ಪಿಟಿಐ ಚಿತ್ರ   

ಲಂಡನ್‌: ಬೆಡ್‌ಫೋರ್ಡ್‌ಶೈರ್‌ನ ಲುಟನ್‌ನಲ್ಲಿ ನಿರ್ಮಿಸಿರುವ ನೂತನ ಗುರು ನಾನಕ್ ಗುರುದ್ವಾರವನ್ನು ಬ್ರಿಟನ್‌ ರಾಜ 3ನೇ ಚಾರ್ಲ್ಸ್‌ ಅವರು ಅಧಿಕೃತವಾಗಿ ಉದ್ಘಾಟಿಸಿದರು.

ಬ್ರಿಟನ್‌ ರಾಜ ಪದವಿಗೇರಿದ ನಂತರ ಇದೇ ಮೊದಲ ಬಾರಿಗೆ ಬೆಡ್‌ಫೋರ್ಡ್‌ಶೈರ್‌ಗೆ ಅವರು ಭೇಟಿ ನೀಡಿದ್ದಾರೆ.

ಗುರುದ್ವಾರ ಉದ್ಘಾಟಿಸಿದ ನಂತರ ಅವರು, ಅನ್ನ ಸಂತರ್ಪಣೆಗಾಗಿ (ಲಂಗರ್) ಆಹಾರ ಸಿದ್ಧಪಡಿಸುವ ಸ್ವಯಂ ಸೇವಕರೊಂದಿಗೆ ಸಂವಾದ ನಡೆಸಿದರು.

ADVERTISEMENT

ನಂತರ ಗುರುದ್ವಾರದ ದಿವಾನ್ ಸಭಾಂಗಣದಲ್ಲಿ ಸಮುದಾಯದ ಮುಖಂಡರೊಂದಿಗೆ ಕುಳಿತು ಕೀರ್ತನೆಗಳನ್ನು ಆಲಿಸಿದರು. ಅಲ್ಲಿದ್ದ ಮಕ್ಕಳನ್ನು ಭೇಟಿ ಮಾಡಿ, ಅವರು ಪ್ರಸ್ತುತಪಡಿಸಿದ ಕೀರ್ತನೆಗಳನ್ನು ಆಲಿಸಿದರು ಎಂದು ಬಕಿಂಗ್‌ಹ್ಯಾಮ್ ಅರಮನೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.