ADVERTISEMENT

ಉಕ್ರೇನ್‌ಗೆ ಅಮೆರಿಕದ ರಾಕೆಟ್‌–ರಷ್ಯಾ ಎಚ್ಚರಿಕೆ

ರಾಯಿಟರ್ಸ್
Published 1 ಫೆಬ್ರುವರಿ 2023, 10:34 IST
Last Updated 1 ಫೆಬ್ರುವರಿ 2023, 10:34 IST
ಡಿಮಿಟ್ರಿ ಪೆಸ್ಕೋವ್‌
ಡಿಮಿಟ್ರಿ ಪೆಸ್ಕೋವ್‌   

ಮಾಸ್ಕೊ (ರಾಯಿಟರ್ಸ್‌): ‘ಮುಂಬರುವ ದಿನಗಳಲ್ಲಿ ಅಮೆರಿಕವು ಉಕ್ರೇನ್‌ಗೆ ದೂರ ವ್ಯಾಪ್ತಿಯ ರಾಕೆಟ್‌ಗಳ ಸಹಾಯ ಒದಗಿಸುವುದರಿಂದ ಸಂಘರ್ಷದ ವಾತಾವರಣ ಹೆಚ್ಚುತ್ತದೆಯೆ ಹೊರತು ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದು ರಷ್ಯಾ ಬುಧವಾರ ತಿಳಿಸಿದೆ.

‘ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರೊಂದಿಗೆ ಮಾತುಕತೆ ನಡೆಸುವ ಯಾವುದೇ ಯೋಜನೆ ಇಲ್ಲ’ ಎಂದು ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಹೇಳಿದ್ದಾರೆ.

‘ಅಮೆರಿಕವು ಉಕ್ರೇನ್‌ಗೆ ₹ 18 ಸಾವಿರ ಕೋಟಿ ಮೌಲ್ಯದ ಮಿಲಿಟರಿ ಸಹಾಯವನ್ನು ನೀಡಲಿದೆ. ಇದರಲ್ಲಿ ಪ್ರಥಮವಾಗಿ ದೂರ ವ್ಯಾಪ್ತಿಯ ರಾಕೆಟ್‌ಗಳೂ ಸೇರ್ಪಡೆಗೊಂಡಿವೆ’ ಎಂದು ಅಮೆರಿಕದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.