ADVERTISEMENT

ನಮ್ಮಲ್ಲಿ ಅಮೆರಿಕದ ಹಲವು ಮಿಲಿಟರಿ ವಿಮಾನಗಳಿಗೆ ಹಾನಿಯಾಗಿದೆ: ಕುವೈತ್ ಸೇನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 9:50 IST
Last Updated 2 ಮಾರ್ಚ್ 2026, 9:50 IST
<div class="paragraphs"><p>ಕುವೈತ್ ಎಂಬಸಿ ಬಳಿ ಅಮೆರಿಕ ಸೇನಾ ನೆಲೆ ಮೇಲೆ ಇರಾನ್ ದಾಳಿ</p></div>

ಕುವೈತ್ ಎಂಬಸಿ ಬಳಿ ಅಮೆರಿಕ ಸೇನಾ ನೆಲೆ ಮೇಲೆ ಇರಾನ್ ದಾಳಿ

   

ಬೆಂಗಳೂರು: ತನ್ನ ದೇಶದಲ್ಲಿ ಅಮೆರಿಕದ ಹಲವಾರು ಮಿಲಿಟರಿ ವಿಮಾನಗಳಿಗೆ ಭಾರಿ ಹಾನಿಯಾಗಿದೆ ಎಂದು ಕುವೈತ್ ಸೇನೆಯ ವಕ್ತಾರರು ತಿಳಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪ್ರಕಟಣೆ ಬಿಡುಗಡೆ ಮಾಡಿರುವ ಕುವೈತ್ ಸೇನೆಯ ವಕ್ತಾರರು, ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ಅಮೆರಿಕದ ಹಲವಾರು ಮಿಲಿಟರಿ ವಿಮಾನಗಳು ಧ್ವಂಸಕ್ಕೆ ಒಳಗಾಗಿವೆ. ಇನ್ನೂ ಕೆಲವಕ್ಕೆ ಹಾನಿಯಾಗಿದೆ. ಆ ದೇಶದ ಹಲವು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಗಾಯಗೊಂಡಿರುವ ಎಲ್ಲ ಸಿಬ್ಬಂದಿಗೆ ಉನ್ನತ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಿತ್ರ ಪಡೆಗಳೊಂದಿಗೆ ನಮ್ಮ ಸೇನೆ ಸಮನ್ವಯ ಸಾಧಿಸಲು ಯಶಸ್ವಿಯಾಗಿದ್ದು, ತುರ್ತು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ವಿವರಿಸಿದೆ.

ಹಾನಿಗೊಳಗಾಗಿರುವ ಅಮೆರಿಕದ ವಿಮಾನಗಳನ್ನು ತಮ್ಮ ನೆಲೆಯಲ್ಲಿ ನಮ್ಮ ಸೇನೆ ಮೇಲುಸ್ತುವಾರಿ ವಹಿಸಿದ್ದು, ಭದ್ರತೆಯನ್ನು ಖಚಿತಪಡಿಸಿದೆ. ಯುಎಸ್ ಪಡೆಗಳೊಂದಿಗೆ ನೇರವಾಗಿ ಸಮನ್ವಯ ಸಾಧಿಸಲಾಗಿದೆ ಎಂದು ತನ್ನ ಮಾಹಿತಿಯಲ್ಲಿ ತಿಳಿಸಿದೆ.

ಇರಾನ್ ಮೇಲೆ ಯುದ್ಧ ಸಾರಿರುವ ಅಮೆರಿಕ ಕುವೈತ್‌ನಲ್ಲಿ ತನ್ನ ಸೇನಾ ನೆಲೆಗಳನ್ನು ಬಳಸಿಕೊಂಡಿದೆ. ಇಲ್ಲಿರುವ ಅಮೆರಿಕದ ವಿಮಾನಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ಮಾಡಿದೆ. ಕುವೈತ್‌ನಲ್ಲಿ ಅಮೆರಿಕ ಯುದ್ಧ ವಿಮಾನದ ಪೈಲಟ್‌ಗಳು ಪ್ಯಾರಾಚೂಟ್ ಬಳಸಿ ಭೂಮಿಗೆ ಜಿಗಿದಿರುವ ಹಲವು ಫೋಟೊ ವಿಡಿಯೊಗಳು ವೈರಲ್ ಆಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.