ADVERTISEMENT

‘ಲೋಕಾಃ ಸಮಸ್ತಾಃ ಸುಖಿನೋ ಭವಂತು’: ಬ್ರಿಟನ್‌ ಗಾಯಕಿ ಟ್ವೀಟ್‌

ಏಜೆನ್ಸೀಸ್
Published 21 ಅಕ್ಟೋಬರ್ 2019, 5:30 IST
Last Updated 21 ಅಕ್ಟೋಬರ್ 2019, 5:30 IST
   

ನವದೆಹಲಿ: ಬ್ರಿಟನ್ ಗಾಯಕಿ ಲೇಡಿ ಗಾಗಾ ಅವರು ಟ್ವೀಟ್ ಮಾಡಿದ ಸಂಸ್ಕೃತದ ಮಂತ್ರ ಇದೀಗ ಜಗತ್ತಿನಾದ್ಯಂತ ವೈರಲ್ ಆಗಿದೆ.

‘ಲೋಕಾಃ ಸಮಸ್ತಾಃ ಸುಖಿನೋ ಭವಂತು’ ಎಂದು ಗಾಗಾ ಟ್ವೀಟ್ ಮಾಡಿದ್ದು, ಇದು ಅವರ ಅಭಿಮಾನಿಗಳಲ್ಲಿ ಸಂತಸ ಮತ್ತು ಕುತೂಹಲ ಹುಟ್ಟಿಸಿದೆ.

ಈ ಬಗ್ಗೆ ಅಭಿಮಾನಿಗಳು ಇದು ನಿಮ್ಮ ಮುಂದಿನ ಆಲ್ಬಮ್? ಅಥವಾ ಹಾಡೇ? ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಪ್ರಪಂಚದಲ್ಲಿರುವ ಪ್ರತಿಯೊಬ್ಬರು ಎಲ್ಲೆಡೆ ಸುಖ, ಸಂತೋಷ, ಮುಕ್ತವಾಗಿ ಬದುಕಲಿ ಎಂಬುದು ಗಾಗಾ ಅವರು ಟ್ವೀಟ್‌ ಮಾಡಿರುವ ಸಂಸ್ಕೃತದ ಸಾಲಿನ ಅರ್ಥ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.