ಜಕಾರ್ತಾ: ಇಂಡೊನೇಷ್ಯಾದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಭೂ ಕುಸಿತ ಸಂಭವಿಸಿದೆ. ಇದರಲ್ಲಿ 11 ಜನ ಮೃತಪಟ್ಟಿದ್ದು, 18 ಮಂದಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.
‘ಸುಮೇದಾಂಗ್ ಜಿಲ್ಲೆಯ ಸಿಂಚಾನುಜುಂಗ ಗ್ರಾಮದಲ್ಲಿ ಎರಡು ಕಡೆ ಭೂ ಕಸಿತ ಸಂಭವಿಸಿದೆ. ಸದ್ಯ ಜನರ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ’ ಎಂದು ರಾಷ್ಟ್ರೀಯ ವಿಪತ್ತು ನಿಯಂತ್ರಣ ಘಟಕದ ವಕ್ತಾರ ಮಾಹಿತಿ ನೀಡಿದರು.
‘ಶನಿವಾರ ರಾತ್ರಿ ವೇಳೆಗೆ ಮಳೆ ನಿಂತಿತ್ತು. ಆದರೆ ಭೂ ಕುಸಿತದಿಂದಾಗಿ ರಸ್ತೆಗಳು ಸಂಪೂರ್ಣವಾಗಿ ಮುಚ್ಚಿ ಹೋಗಿದ್ದು, ಅಧಿಕಾರಿಗಳು ರಸ್ತೆ ತೆರವು ಕಾರ್ಯದಲ್ಲಿ ನಿರತರಾಗಿದ್ದಾರೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.