ADVERTISEMENT

ಅಮೆರಿಕ: ಅತಿದೊಡ್ಡ ಹಿಂದೂ ದೇಗುಲ ಉದ್ಘಾಟನೆ

ಮಹಾಂತಸ್ವಾಮಿ ಮಹಾರಾಜರಿಂದ ‘ಪ್ರಾಣ ಪ್ರತಿಷ್ಠಾಪನೆ’; ವಿವಿಧ ಸಮುದಾಯ, ಧರ್ಮದ ಭಕ್ತರು ಭಾಗಿ

ಪಿಟಿಐ
Published 9 ಅಕ್ಟೋಬರ್ 2023, 23:30 IST
Last Updated 9 ಅಕ್ಟೋಬರ್ 2023, 23:30 IST
ಅಮೆರಿಕದ ನ್ಯೂಜೆರ್ಸಿಯಲ್ಲಿ ನಿರ್ಮಿಸಲಾದ ಸ್ವಾಮಿನಾರಾಯಣ ಅಕ್ಷರಧಾಮ ದೇಗುಲದ ಹೊರಾಂಗಣ ನೋಟ –ಎಎಫ್‌ಪಿ ಚಿತ್ರ
ಅಮೆರಿಕದ ನ್ಯೂಜೆರ್ಸಿಯಲ್ಲಿ ನಿರ್ಮಿಸಲಾದ ಸ್ವಾಮಿನಾರಾಯಣ ಅಕ್ಷರಧಾಮ ದೇಗುಲದ ಹೊರಾಂಗಣ ನೋಟ –ಎಎಫ್‌ಪಿ ಚಿತ್ರ   

ರಾಬಿನ್ಸ್‌ವಿಲ್ಲೆ (ಅಮೆರಿಕ): ಅಮೆರಿಕದ ನ್ಯೂಜೆರ್ಸಿಯಲ್ಲಿ ನಿರ್ಮಿಸಲಾದ ಅತಿ ದೊಡ್ಡ ಹಿಂದೂ ದೇಗುಲ ಬಿಎಪಿಎಸ್‌ (ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿ ನಾರಾಯಣ ಸಂಸ್ಥೆ) ಸ್ವಾಮಿನಾರಾಯಣ ಅಕ್ಷರಧಾಮ ಉದ್ಘಾಟನೆಗೊಂಡಿದೆ.

ಮಹಾಂತಸ್ವಾಮಿ ಮಹಾರಾಜ ಅವರು ‘ಪ್ರಾಣ ಪ್ರತಿಷ್ಠಾಪನೆ’ ನೆರವೇರಿಸುವ ಮೂಲಕ ದೇಗುಲವನ್ನು ಉದ್ಘಾಟಿಸಿದರು.

ವಿದೇಶದಲ್ಲಿ ನಿರ್ಮಾಣವಾಗಿರುವ ಅತಿ ದೊಡ್ಡ ದೇವಾಲಯ ಇದಾಗಿದೆ. ನ್ಯೂಜೆರ್ಸಿಯ ಲಿಟಲ್‌ ರಾಬಿನ್ಸ್‌ವಿಲ್ಲೆಯಲ್ಲಿರುವ ಈ ದೇಗುಲ ನಿರ್ಮಿಸಲು ಜಗತ್ತಿನ ವಿವಿಧೆಡೆಯ 12,500 ಸ್ವಯಂಸೇವಕರ ನೆರವಿನಿಂದ ನೆರವಾಗಿದ್ದಾರೆ. 185 ಎಕರೆಗೂ ಹೆಚ್ಚು ಪ್ರದೇಶದಲ್ಲಿ 12 ವರ್ಷಗಳ ಅವಧಿಯಲ್ಲಿ (2011–2023) ಈ ದೇವಾಲಯ ನಿರ್ಮಿಸಲಾಗಿದೆ.

ADVERTISEMENT
ಅಮೆರಿಕದ ನ್ಯೂಜೆರ್ಸಿಯಲ್ಲಿ ನಿರ್ಮಿಸಲಾದ ಸ್ವಾಮಿನಾರಾಯಣ ಅಕ್ಷರಧಾಮ ದೇಗುಲದ ಹೊರಾಂಗಣ ನೋಟ –ಎಎಫ್‌ಪಿ ಚಿತ್ರ

‘ಸ್ವಾಮಿನಾರಾಯಣ ಅಕ್ಷರಧಾಮವು ಭಾರತದ ಪರಂಪರೆ ಮತ್ತು ಸಂಸ್ಕೃತಿಯನ್ನು ಆಧುನಿಕ ಅಮೆರಿಕಕ್ಕೆ ಪ್ರಸ್ತುತಪಡಿಸಲಿದೆ. ಈ ದಿನಕ್ಕಾಗಿ ನಾವು ಹಲವಾರು ದಿನಗಳಿಂದ ಕಾಯುತ್ತಿದ್ದೆವು. ಆ ದಿನ ಈಗ ಬಂದಿದೆ’ ಎಂದು ಸ್ವಯಂಸೇವಕ ಲೆನಿನ್‌ ಜೋಶಿ ಹೇಳಿದರು.

‘ನಿಸ್ವಾರ್ಥ ಸೇವೆ ಮತ್ತು ಭಕ್ತಿಯ ಮನೋಭಾವವು ದೇವಾಲಯದ ಅಡಿಪಾಯವಾಗಿದೆ’ ಎಂದು ನ್ಯೂಯಾರ್ಕ್‌ನ ಮಾಧ್ಯಮ ಮತ್ತು ಧಾರ್ಮಿಕ ವಿದ್ವಾಂಸ ಯೋಗಿ ತ್ರಿವೇದಿ ಹೇಳಿದ್ದಾರೆ.

‘ದೇಗುಲದಲ್ಲಿ ವಿಶಿಷ್ಟ ವಾಸ್ತುಶಿಲ್ಪ ಬಳಸಿಕೊಳ್ಳಲಾಗಿದೆ. ದೇಗುಲದ ಕೆಳಮಹಡಿಯಲ್ಲಿ ಶ್ರೀ ಕೃಷ್ಣ, ರಾಮ, ವೇದ, ಉಪನಿಷತ್ತುಗಳ ಸಂದೇಶಗಳನ್ನು ಉಲ್ಲೇಖಿಸಲಾಗಿದೆ. ಅಲ್ಲದೇ ಸಾಕ್ರಟೀಸ್‌, ಅಲ್ಬರ್ಟ್‌ ಐನ್‌ಸ್ಟೀನ್‌, ರೂಮಿ, ಅಮೆರಿಕ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್‌ ಹಾಗೂ ಮಾರ್ಟಿನ್‌ ಲೂಥರ್‌ ಕಿಂಗ್‌ ಅವರ ಸಂದೇಶಗಳನ್ನು ಉಲ್ಲೇಖಿಸಲಾಗಿದೆ’ ಎಂದು ವಿವರಿಸಿದರು.

ಅಮೆರಿಕದ ನ್ಯೂಜೆರ್ಸಿಯಲ್ಲಿ ನಿರ್ಮಿಸಲಾದ ಸ್ವಾಮಿನಾರಾಯಣ ಅಕ್ಷರಧಾಮ ದೇಗುಲದ ಹೊರಾಂಗಣ ನೋಟ –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.