ADVERTISEMENT

ಉಕ್ರೇನ್‌ ನಿಶ್ಯಸ್ತ್ರೀಕರಣ ಅಗತ್ಯ: ಲಾವ್ರೊವ್‌

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 19:59 IST
Last Updated 27 ಡಿಸೆಂಬರ್ 2022, 19:59 IST
   

ಕೀವ್‌: ‘ಉಕ್ರೇನ್‌ ಸ್ವತಃ ನಿಶ್ಯಸ್ತ್ರೀಕರಣ ಹೊಂದಬೇಕು ಇಲ್ಲವೇ ಅದನ್ನು ನಮ್ಮ ಸೇನಾ ಪಡೆಗಳೇ ನಿಶ್ಯಸ್ತ್ರೀಕರಣಗೊಳಿಸಲಿವೆ’ ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೈ ಲಾವ್ರೊವ್‌ ಮಂಗಳವಾರ ಹೇಳಿದ್ದಾರೆ.

‘ರಷ್ಯಾಕ್ಕೆ ಸೇನಾ ಬೆದರಿಕೆಯೊಡ್ಡುವುದು ಕೊನೆಯಾಗಬೇಕು. ನಮ್ಮಪ್ರಮುಖ ಬೇಡಿಕೆಯಾದ ‘ನಿಶ್ಯಸ್ತ್ರೀಕರಣ’ ಮತ್ತು ‘ನಾಜಿವಾದ ರಹಿತ’ ದೇಶವಾಗಿ ಉಳಿಯುವುದನ್ನು ಉಕ್ರೇನ್‌ ಪೂರೈಸಲೇಬೇಕು. ಇಲ್ಲದಿದ್ದರೆ ರಷ್ಯಾ ಸೇನೆಯೇ ಈ ಸಮಸ್ಯೆಯನ್ನು ಪರಿಹರಿಸಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

‘ಫೆ.24 ರಂದು ಪ್ರಾರಂಭವಾದ ಸಂಘರ್ಷವು ಎಷ್ಟು ಕಾಲ ಮುಂದುವರಿಯಲಿದೆ ಎಂಬುದು ಕೀವ್‌ ಮತ್ತು ವಾಷಿಂಗ್ಟನ್ ನಿರ್ಧಾರದ ಮೇಲೆ ನಿಂತಿದೆ. ಚೆಂಡು ಈಗ ಆ ಬದಿಯಲ್ಲಿದೆ. ಅವರು ಯಾವುದೇ ಕ್ಷಣದಲ್ಲಿ ನಿರರ್ಥಕ ಪ್ರತಿರೋಧವನ್ನು ನಿಲ್ಲಿಸಬಹುದು’ ಎಂದು ಲಾವ್ರೊವ್‌ ಅವರು ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆ ‘ಟಾಸ್‌’ಗೆ ತಿಳಿಸಿದ್ದಾರೆ.

ADVERTISEMENT

ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಅವರು ‘ನಮ್ಮ ಸರ್ಕಾರ ಮಾತುಕತೆ ಮೂಲಕ ಯುದ್ಧ ಕೊನೆಗೊಳಿಸಲು ಬಯಸಿದೆ. ಆದರೆ, ರಷ್ಯಾ ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ’ ಎಂದು ಹೇಳಿಕೆ ನೀಡಿದ ಬೆನ್ನಲೇ ಲಾವ್ರೊವ್‌ ಈ ಪ್ರತಿಕ್ರಿಯೆ ನೀಡಿದ್ದಾರೆ.

ಉಕ್ರೇನ್‌ಗೆ ಪಾಶ್ಚಿಮಾತ್ಯ ದೇಶಗಳ ಬೆಂಬಲವು ನೇರ ಸಂಘರ್ಷಕ್ಕೆ ಕಾರಣವಾಗಲಿದೆ. ರಷ್ಯಾ ವಿರುದ್ಧ ಜಯ ಸಾಧಿಸುವುದು ಅಮೆರಿಕ ಮತ್ತು ಅದರ ನ್ಯಾಟೊ ಮಿತ್ರರಾಷ್ಟ್ರಗಳ ಕಾರ್ಯತಂತ್ರದ ಗುರಿಯಾಗಿದೆ.ಯುದ್ಧಭೂಮಿಯಲ್ಲಿ ನಮ್ಮ ರಾಷ್ಟ್ರವನ್ನುಗಣನೀಯವಾಗಿ ದುರ್ಬಲಗೊಳಿಸಲು ಅಥವಾ ನಾಶಮಾಡಲು ಅವರು ಯೋಜಿಸಿದ್ದಾರೆ’ ಎಂದುಲಾವ್ರೊವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.