ADVERTISEMENT

ಎಚ್‌–1ಬಿ ವೀಸಾ: ಹೊಸ ನಿಯಮ ಪ್ರಶ್ನಿಸಿ ಅರ್ಜಿ

ಪಿಟಿಐ
Published 20 ಅಕ್ಟೋಬರ್ 2020, 11:48 IST
Last Updated 20 ಅಕ್ಟೋಬರ್ 2020, 11:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌:ಎಚ್‌–1ಬಿ ವೀಸಾಕ್ಕೆ ಸಂಬಂಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಆಡಳಿತ ರೂಪಿಸಿರುವ ಹೊಸ ನಿಯಮಗಳನ್ನು ಪ್ರಶ್ನಿಸಿ ಯುಎಸ್‌ ಚೇಂಬರ್ಸ್‌ ಆಫ್‌ ಕಾಮರ್ಸ್‌ (ಯುಎಸ್‌ಸಿಸಿ), ನ್ಯಾಷನಲ್‌ ಅಸೋಸಿಯೇಷನ್‌ ಆಫ್‌ ಮ್ಯಾನ್ಯುಫಾಕ್ಚರರ್ಸ್‌ (ಎನ್‌ಎಎಂ) ಸೇರಿದಂತೆ ಹಲವಾರು ಸಂಘಟನೆಗಳು ಕೋರ್ಟ್‌ ಮೊರೆ ಹೋಗಿವೆ.

‘ಈ ಹೊಸ ನಿಯಮಗಳು ಸ್ವೇಚ್ಛಾಚಾರಕ್ಕೆ ಎಡೆಮಾಡಿ ಕೊಡಲಿದ್ದು, ಇವುಗಳಿಗೆ ಗೊತ್ತುಗುರಿಯೇ ಇಲ್ಲ’ ಎಂದು ಈ ಸಂಘಟನೆಗಳು ಪ್ರತಿಪಾದಿಸಿವೆ. ಅಲ್ಲದೇ, ಈ ನಿಯಮಗಳ ಪರಿಣಾಮವಾಗಿ ಅಧಿಕ ಕೌಶಲವಿರುವ ಉದ್ಯೋಗಿಗಳು ಅಮೆರಿಕಕ್ಕೆ ಬರುವುದು ಕಷ್ಟವಾಗಲಿದೆ ಎಂದೂ ಅಭಿಪ್ರಾಯಪಟ್ಟಿವೆ.

‘ಈಗಾಗಲೇ ಅಮೆರಿಕದಲ್ಲಿ ಉದ್ಯೋಗದಲ್ಲಿರುವ, ಕುಶಲತೆ ಹೊಂದಿರುವವರನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ಇದರಿಂದಾಗಿ ಉತ್ಪಾದನಾ ಕ್ಷೇತ್ರ ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂಬ ಆತಂಕವನ್ನೂ ಎನ್‌ಎಎಂ,ಯುಎಸ್‌ಸಿಸಿ ವ್ಯಕ್ತಪಡಿಸಿವೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.