ADVERTISEMENT

ವೈರಾಣು ಕೊಲ್ಲದಿದ್ದರೂ, ಹವಾಮಾನ ಬದಲಾವಣೆ ನಮ್ಮನ್ನು ನಾಶಪಡಿಸಬಲ್ಲದು

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಲವು ದೇಶದ ನಾಯಕರ ಕಳವಳ

ಪಿಟಿಐ
Published 27 ಸೆಪ್ಟೆಂಬರ್ 2020, 10:14 IST
Last Updated 27 ಸೆಪ್ಟೆಂಬರ್ 2020, 10:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೋಹಾನ್ಸ್‌ಬರ್ಗ್: ಪ್ರಾಕೃತಿಕ ವಿಪ್ಲವಗಳ ಈ ವರ್ಷದಲ್ಲಿ ನಡಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಕೆಲವು ರಾಷ್ಟ್ರಗಳ ನಾಯಕರು ‘ ವೈರಸ್ ನಮ್ಮನ್ನು ಕೊಲ್ಲದಿದ್ದರೂ, ಹವಾಮಾನ ಬದಲಾವಣೆ ಆ ಕೆಲಸವನ್ನು ಮಾಡಬಹುದು...'ಎಂಬ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ಸೈಬೀರಿಯಾ ರಾಷ್ಟ್ರದಲ್ಲಿ ಈ ವರ್ಷ ಅತ್ಯಧಿಕ ತಾಪಮಾನ ದಾಖಲಾಗಿದೆ. ಕೆನಡಾ ಮತ್ತು ಗ್ರೀನ್‌ಲ್ಯಾಂಡ್‌ನಲ್ಲಿ ಐಸ್‌ಕ್ಯಾಪ್‌ಗಳು ಸಮುದ್ರಕ್ಕೆ ಜಾರುತ್ತಿವೆ. ಜಾಗತಿಕ ತಾಪಮಾನದಿಂದ ಉಂಟಾಗುತ್ತಿರುವ ಈ ದುರಂತಗಳಿಗೆ ಯಾವುದೇ ‘ಲಸಿಕೆ‘ ಎಂಬುದು ಈ ರಾಷ್ಟ್ರಗಳಿಗೆ ಅರಿವಾಗಿದೆ.

ಫಿಜಿ ರಾಷ್ಟ್ರದ ಪ್ರಧಾನ ಮಂತ್ರಿ ಫ್ರಾಂಕ್ ಬೈನಿರಾಮ್ ಅವರು ಅಮೆರಿಕದಲ್ಲಿ ಸಂಭವಿಸುತ್ತಿರುವ ಕಾಳ್ಗಿಚ್ಚು ಘಟನೆಗಳನ್ನು ಉಲ್ಲೇಖಿಸಿ ‘ನಾವು ಈಗಾಗಲೇ ಇಂಥ ಪ್ರಾಕೃತಿಕ ಅವಗಡಗಳ ಆವೃತ್ತಿಯನ್ನು ನೋಡಿದ್ದೇವೆ‘ ಎಂದು ಹೇಳಿದ್ದಾರೆ. ಗ್ರೀನ್‌ಲ್ಯಾಂಡ್‌ನಲ್ಲಿ ಸಂಭವಿಸುತ್ತಿರುವ ಹಿಮಪಾತ, ಹಲವು ದ್ವೀಪರಾಷ್ಟ್ರಗಳು ಎದುರಿಸುತ್ತಿರುವ ಸಮಸ್ಯೆಗಿಂತಲೂ ದೊಡ್ಡದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಮ್ಮ ಗಮನ ಹಾಗೂ ಸಂಪನ್ಮೂಲ ಬೇರೆಡೆಗೆ ತಿರುಗುವಂತಾಯಿತು. ಈ ಮಧ್ಯೆ ಜಾಗತಿಕ ಹವಾಮಾನ ಶೃಂಗಸಭೆ 2021ಕ್ಕೆ ಮುಂದೂಡಲಾಯಿತು‘ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.