ADVERTISEMENT

ತಾವು ಮಿಸ್‌ ಮಾಡಿಕೊಳ್ಳುತ್ತಿರುವುದನ್ನು ಚಿತ್ರಗಳ ಮೂಲಕ ಜಗಕ್ಕೆ ತೋರಿಸಿದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 3:35 IST
Last Updated 28 ಏಪ್ರಿಲ್ 2020, 3:35 IST
   
""
""
""
""
""

ಕೊರೊನಾ ಸೋಂಕಿನಿಂದ ಜಗತ್ತಿನ ಬಹುತೇಕ ದೇಶಗಳು ತಲ್ಲಣಿಸಿವೆ. ಈಗಾಗಲೇ ಕೊರೊನಾ ವೈರಸ್‌ ಸೋಂಕಿಗೆ ಜಗತ್ತಿನಾದ್ಯಂತ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಯುರೋಪ್‌ ಮತ್ತು ಅಮೆರಿಕಗಳನ್ನು ಅತಿಹೆಚ್ಚು ಆತಂಕಕ್ಕೀಡು ಮಾಡಿರುವ ಕೊರೊನಾ ಸೋಂಕು ಜನರ ಜೀವನಕ್ರಮವನ್ನೇ ಏರುಪೇರು ಮಾಡಿದೆ.

ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಅಮೆರಿಕಾ ಮತ್ತು ಯುರೋಪಿನ ಬಹುತೇಕ ರಾಷ್ಟ್ರಗಳಲ್ಲಿ ಸಂಪೂರ್ಣ ನಿರ್ಬಂಧ (ಲಾಕ್‌ಡೌನ್‌) ಹೇರಲಾಗಿದೆ. ಲಾಕ್‌ಡೌನ್‌ ಪರಿಣಾಮ ಬಹುತೇಕರು ಹೊರಬರದೇ ತಮ್ಮ ಮನೆಗಳಲ್ಲಿಯೇ ಉಳಿದುಕೊಂಡು ಬದುಕು ಸಾಗಿಸುವುದು ಅನಿವಾರ್ಯವಾಗಿದೆ.

ADVERTISEMENT

ಮಕ್ಕಳು, ಯುವಕರು, ಮಧ್ಯವಯಸ್ಕರರು ಮತ್ತು ಇಳಿವಯಸ್ಸಿನ ಹಿರಿಯರ ಮೇಲೆ ಈ ಲಾಕ್‌ಡೌನ್‌ ಪರಿಣಾಮ ಬೀರಿದೆ. ಸಂಬಂಧಿಗಳು, ಸ್ನೇಹಿತರು ಮತ್ತು ಸಹೋದ್ಯೋಗಿಗಳನ್ನು ಎಲ್ಲರೂ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ.

ವಿಶೇಷವಾಗಿ ಮಕ್ಕಳು ತಮ್ಮ ಶಾಲೆ, ಶಿಕ್ಷಕರು, ಸ್ನೇಹಿತರು, ಆಟಗಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಮಕ್ಕಳು ತಾವೇನು ಮಿಸ್‌ ಮಾಡಿಕೊಳ್ಳುತ್ತಿದ್ದೀವಿ ಎಂಬುದನ್ನು ತಾವೇಬಿಡಿಸಿದ ಚಿತ್ರಗಳ ಮೂಲಕ ಜಗತ್ತಿನ ಮುಂದೆ ಪ್ರದರ್ಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.