ADVERTISEMENT

ವಿವಿಧ ಬೇಡಿಕೆಗೆ ಆಗ್ರಹಿಸಿ ಲೂವ್ರಾ ಮ್ಯೂಸಿಯಂ ಸಿಬ್ಬಂದಿ ಮುಷ್ಕರ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 14:04 IST
Last Updated 15 ಡಿಸೆಂಬರ್ 2025, 14:04 IST
   

ಪ್ಯಾರಿಸ್‌: ಕೆಲಸದ ವಾತಾವರಣವನ್ನು ಉತ್ತಮಪಡಿಸುವಂತೆ ಮತ್ತು ಇತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಲೂವ್ರಾ ಮ್ಯೂಸಿಯಂನ ಸಿಬ್ಬಂದಿ ಮುಷ್ಕರ ನಡೆಸಲು ಸಭೆ ನಡೆಸಿದ್ದಾರೆ.

ಸೋಮವಾರ ನಡೆದ ಸಭೆಯಲ್ಲಿ 400 ಕಾರ್ಮಿಕರು ಮತ ಚಲಾಯಿಸಿ, ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದಾರೆ ಎಂದು ಸಿಎಫ್‌ಡಿಟಿ ಸಂಘಟನೆ ತಿಳಿಸಿದೆ.

ಕಾರ್ಮಿಕ ಸಂಘಟನೆ ಮತ್ತು ಸರ್ಕಾರಿ ಅಧಿಕಾರಿಗಳ ನಡುವೆ ಕಳೆದ ವಾರ ಈ ಕುರಿತು ಮಾತುಕತೆ ನಡೆದಿತ್ತು. ಇದಾದ ಬಳಿಕ ಮುಷ್ಕರಕ್ಕೆ ಮತ ಚಲಾಯಿಸಲಾಗಿದೆ. ಮುಷ್ಕರದಿಂದ ಮ್ಯೂಸಿಯಂಗೆ ಭೇಟಿ ನೀಡುವವರಿಗೆ ಆಡಚಣೆಯಾಗಿದೆ ಎಂದು ಸಿಎಫ್‌ಡಿಟಿ ಸಂಘಟನೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.