ADVERTISEMENT

ದ್ವೀಪ ರಾಷ್ಟ್ರ ಟೊಂಗಾ ಸಮುದ್ರದಲ್ಲಿ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ

ರಾಯಿಟರ್ಸ್
Published 11 ನವೆಂಬರ್ 2022, 14:05 IST
Last Updated 11 ನವೆಂಬರ್ 2022, 14:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನುಕುಅಲೊಫಾ: ದಕ್ಷಿಣ ಪೆಸಿಫಿಕ್‌ನ ಟೊಂಗಾ ದೇಶದ ಸಮುದ್ರದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಅಮೆರಿಕದ ಭೌಗೋಳಿಕ ಸಮೀಕ್ಷೆ ಕೇಂದ್ರ(ಯುಎಸ್‌ಜಿಎಸ್) ತಿಳಿಸಿದೆ.

ಯುಎಸ್‌ಜಿಎಸ್ ಪ್ರಕಾರ, ಸಮುದ್ರದ 10 ಕಿ.ಮೀ ಆಳ ಮತ್ತು ನಿಯೆಫು ನಗರದಿಂದ ಆಗ್ನೇಯಕ್ಕೆ 200 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ.

‘ಭೂಕಂಪದ ಕೇಂದ್ರಬಿಂದುವಿನಿಂದ 300 ಕಿಮೀ ವ್ಯಾಪ್ತಿಯಲ್ಲಿರುವ ಕರಾವಳಿಯಲ್ಲಿ ಅಪಾಯಕಾರಿ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದೆ’ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಹೇಳಿದೆ.

171 ದ್ವೀಪಗಳಲ್ಲಿ ಹರಡಿಕೊಂಡಿರುವ ಸುಮಾರು 1,00,000 ಜನರನ್ನು ಹೊಂದಿರುವ ಟೊಂಗಾ ದೇಶದ ಸುತ್ತಲೂ ಭೂಕಂಪನ ಅತ್ಯಂತ ಸಾಮಾನ್ಯವಾದುವಾಗಿದೆ.

ADVERTISEMENT

ಈ ವರ್ಷದ ಜನವರಿಯಲ್ಲಿ, ‘ಹಂಗಾ-ಟೋಂಗಾ-ಹಂಗಾ-ಹಾ’ಎಂಬ ಬೃಹತ್ ಜ್ವಾಲಾಮುಖಿಯ ಸ್ಫೋಟದಿಂದ ದೇಶ ತತ್ತರಿಸಿದೆ. ಬಾತ್ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ, ಇದು ಆಧುನಿಕ ಯುಗದ ಅತ್ಯಂತ ಶಕ್ತಿಶಾಲಿ ಜ್ವಾಲಾಮುಖಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.