ADVERTISEMENT

ಮಹಾತ್ಮ ಗಾಂಧಿ ಕನ್ನಡಕ ₹2.54 ಕೋಟಿಗೆ ಬ್ರಿಟನ್‌ನಲ್ಲಿ ಹರಾಜು

ಏಜೆನ್ಸೀಸ್
Published 22 ಆಗಸ್ಟ್ 2020, 11:30 IST
Last Updated 22 ಆಗಸ್ಟ್ 2020, 11:30 IST
   

ಲಂಡನ್: ಮಹಾತ್ಮ ಗಾಂಧಿ ಅವರ ಚಿನ್ನ ಲೇಪಿತ ಕನ್ನಡಕ ಸುಮಾರು ₹2.54 ಕೋಟಿಗೆ (3,40,000 ಡಾಲರ್) ಮಾರಾಟವಾಗಿದೆ ಎಂದು ಬ್ರಿಟನ್‌ನ ಹರಾಜು ಸಂಸ್ಥೆ ತಿಳಿಸಿದೆ.

‘ನಾಲ್ಕು ವಾರಗಳ ಹಿಂದೆ ನಾವದನ್ನು ಕಂಡುಕೊಂಡಿದ್ದೆವು. ತಮ್ಮ ಚಿಕ್ಕಪ್ಪನಿಗೆ ಗಾಂಧಿಯವರು ನೀಡಿದ್ದ ಆ ಕನ್ನಡಕವನ್ನು ವ್ಯಕ್ತಿಯೊಬ್ಬರು ನೀಡಿದ್ದರು’ ಎಂದು ಕನ್ನಡಕ ಮಾರಾಟವಾದ ಬಳಿಕ ‘ಈಸ್ಟ್ ಬ್ರಿಸ್ಟಲ್ ಆಕ್ಷನ್ಸ್’ ಸಂಸ್ಥೆಯು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದೆ.

‘ಅಪೂರ್ವ ವಸ್ತುವೊಂದಕ್ಕೆ ಬಿಡ್‌ನಲ್ಲಿ ಅತ್ಯುತ್ತಮ ಫಲಿತಾಂಶ ದೊರೆತಿದೆ! ಬಿಡ್‌ನಲ್ಲಿ ಭಾಗಿಯಾದವರಿಗೆಲ್ಲ ಧನ್ಯವಾದಗಳು’ ಎಂದು ‘ಈಸ್ಟ್ ಬ್ರಿಸ್ಟಲ್ ಆಕ್ಷನ್ಸ್’ ಬರೆದುಕೊಂಡಿದೆ.

ADVERTISEMENT

ಗಾಂಧಿಯವರು ಹಳೆಯ ಅಥವಾ ತಮಗೆ ಬೇಡವೆನಿಸಿದ ವಸ್ತುಗಳನ್ನು ಅಗತ್ಯ ಇರುವವರಿಗೆ ಮತ್ತು ಸಹಾಯ ಮಾಡಿದವರಿಗೆ ನೀಡುತ್ತಿದ್ದರು. ಈ ಕನ್ನಡಕವನ್ನು ದಕ್ಷಿಣ ಆಫ್ರಿಕಾದಲ್ಲಿ 1920–30ರ ಅವಧಿಯಲ್ಲಿ ಬ್ರಿಟಿಷ್ ಪೆಟ್ರೋಲಿಯಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಗೆ ನೀಡಿದ್ದರು ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.