ADVERTISEMENT

ಶ್ರೀಲಂಕಾ: ಸಾರ್ವತ್ರಿಕ ಚುನಾವಣೆಗೆ ರಾಜಪಕ್ಸೆ ಒತ್ತಾಯ

ಪಿಟಿಐ
Published 2 ಡಿಸೆಂಬರ್ 2018, 17:37 IST
Last Updated 2 ಡಿಸೆಂಬರ್ 2018, 17:37 IST

ಕೊಲಂಬೊ: ಎರಡು ಬಾರಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿರುವ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ, ಪ್ರಸ್ತುತ ರಾಜ
ಕೀಯ ಬಿಕ್ಕಟ್ಟು ಅಂತ್ಯಗೊಳಿಸಲು ಅವಧಿಗೆ ಮುನ್ನವೇ ಸಂಸತ್‌ ಚುನಾವಣೆ ನಡೆಸುವಂತೆ ಒತ್ತಾಯಿಸಿದ್ದಾರೆ.

‘ಸಾರ್ವತ್ರಿಕ ಚುನಾವಣೆ ನಡೆಸುವ ಮೂಲಕ ಸ್ಥಿರವಾದ ಸರ್ಕಾರ ಉಳಿಯಲು ಸಾಧ್ಯ. ಜನರೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ರಾಜಪಕ್ಸೆ ಪ್ರತಿಪಾದಿಸಿದ್ದಾರೆ.ಕಳೆದ ಅಕ್ಟೋಬರ್‌ 26ರಂದು ಪ್ರಧಾನಿ ರನಿಲ್‌ ವಿಕ್ರಮ ಸಿಂಘೆ ಅವರನ್ನು ಪದಚ್ಯುತಗೊಳಿಸಿದ್ದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು, ರಾಜಪಕ್ಸೆ ಅವರನ್ನು ನೇಮಿಸಿದ್ದರು. ಬಳಿಕ, 20 ತಿಂಗಳ ಮುನ್ನವೇ ಸಿರಿಸೇನಾ ಅವರು ಸಂಸತ್‌ ವಿಸರ್ಜಿಸಿದ್ದರು. ಆದರೆ, ಸುಪ್ರೀಂ ಕೋರ್ಟ್‌ ಸಿರಿಸೇನಾ ಅವರ ನಿರ್ಧಾರವನ್ನು ರದ್ದುಪಡಿಸಿ, ಚುನಾವಣೆ ಸಿದ್ಧತೆಗೆ ತಡೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT