ADVERTISEMENT

ಆಸ್ಟ್ರೇಲಿಯಾದ ಹಡಗಿನಲ್ಲಿ 800 ಪ್ರಯಾಣಿಕರಿಗೆ ಕೋವಿಡ್: ಕಟ್ಟೆಚ್ಚರ ಘೋಷಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ನವೆಂಬರ್ 2022, 7:37 IST
Last Updated 12 ನವೆಂಬರ್ 2022, 7:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿ ನಗರದ ಬಂದರಿನಲ್ಲಿ ನಿಲ್ಲಿಸಲಾಗಿರುವ ‘ಮೆಜೆಸ್ಟಿಕ್‌ ಪ್ರಿನ್ಸಸ್‌‘ ಹಡಗಿನಲ್ಲಿ ಬರೋಬ್ಬರಿ 800 ಮಂದಿ ಪ್ರಯಾಣಿಕರಲ್ಲಿ ಕೋವಿಡ್‌ ಪಾಸಿಟಿವ್ ‌ಕಾಣಿಸಿಕೊಂಡಿದೆ.

ಆಸ್ಟ್ರೇಲಿಯಾದ ಅತೀ ಹೆಚ್ಚು ಜನಸಂಖ್ಯೆ ಇರುವ ನ್ಯೂ ಸೌತ್‌ ವೇಲ್ಸ್‌ ರಾಜಧಾನಿಯಾಗಿರುವ ಸಿಡ್ನಿ ನಗರದಲ್ಲಿ ಈ ಹಡಗು ಲಂಗರು ಹಾಕಿದ್ದು, ಕೋವಿಡ್‌ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಎಂದು ಆಸ್ಟ್ರೇಲಿಯಾದ ಗೃಹ ಮಂತ್ರಾಲಯ ನಾಗರಿಕರಿಗೆ ಸೂಚನೆ ನೀಡಿದೆ.

ಹಡಗಿನಲ್ಲಿ ನೂರಾರು ಜನರಿಗೆ ಕೋವಿಡ್‌ ಪತ್ತೆಯಾಗಿ‌ದ್ದು, ಹೆಚ್ಚಿನ ಪ್ರ‌ಮಾಣದಲ್ಲಿ ಹರಡುವ ಸಾಧ್ಯತೆ ಇದೆ. ಹೀಗೆ ಈ ಪ್ರಕರಣವನ್ನು ಆಸ್ಟ್ರೇಲಿಯಾ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ADVERTISEMENT

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಗೃಹ ಸಚಿವ ಕ್ಲಾರ್‌ ಓ‘ನೀಲ್‌, ‘ಸ್ಥಳದಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತಿದೆ. ಮೆಜೆಸ್ಟಿಕ್‌ ಪ್ರಿನ್ಸನ್‌ನಿಂದ ಪ್ರಯಾಣಿಕರನ್ನು ಹೊರ ತರುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ‘ ಎಂಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.