ADVERTISEMENT

ಶ್ರೀಲಂಕಾದ ಅಭಿವೃದ್ಧಿಗೆ ಕೈಜೋಡಿಸಿ: ಕಾರ್ಮಿಕರಿಗೆ ವಿಕ್ರಮಸಿಂಘೆ ಆಹ್ವಾನ

ಪಿಟಿಐ
Published 1 ಮೇ 2023, 18:55 IST
Last Updated 1 ಮೇ 2023, 18:55 IST
ರಾನಿಲ್‌ ವಿಕ್ರಮಸಿಂಘೆ
ರಾನಿಲ್‌ ವಿಕ್ರಮಸಿಂಘೆ   

ಕೊಲಂಬೊ: ನಗದು ಕೊರತೆ ಎದುರಿಸುತ್ತಿರುವ ದ್ವೀಪ ರಾಷ್ಟ್ರವನ್ನು 2048ರ ವೇಳೆಗೆ ಅಭಿವೃದ್ಧಿಹೊಂದಿದ ದೇಶವನ್ನಾಗಿಸಲು ಎಲ್ಲಾ ಕಾರ್ಮಿಕರು ಕೈಜೋಡಿಸಬೇಕೆಂದು ಶ್ರೀಲಂಕಾ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಸೋಮವಾರ ಕರೆ ನೀಡಿದ್ದಾರೆ.

‘ದೇಶವು ಆರ್ಥಿಕವಾಗಿ ಅಭಿವೃದ್ಧಿ ಹೊಂದುವಲ್ಲಿ ದುಡಿಯುವ ವರ್ಗವು ಮಹತ್ವದ ಪಾತ್ರ ವಹಿಸಲಿದೆ’ ಎಂದು ಅಂತರರಾಷ್ಟ್ರೀಯ ಕಾರ್ಮಿಕ ದಿನದ ಅಂಗವಾಗಿ ನೀಡಿರುವ ಸಂದೇಶದಲ್ಲಿ ಅವರು ಹೇಳಿದ್ದಾರೆ.

‘ಎಲ್ಲಾ ಸವಾಲುಗಳನ್ನು ಎದುರಿಸಿ ದೇಶವನ್ನು ಮುನ್ನಡೆಸುವ ಶಕ್ತಿ ಕಾರ್ಮಿಕರಿಗಿದೆ’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.