ADVERTISEMENT

ಮಲೇಷ್ಯಾ: ಇನ್ಮುಂದೆ ಭಾರತೀಯ ಪ್ರವಾಸಿಗರಿಗೆ ವೀಸಾ ಮುಕ್ತ ಪ್ರವೇಶ

ಭಾರತೀಯ ಮತ್ತು ಚೀನಿ ಪ್ರವಾಸಿಗರಿಗೆ 30 ದಿನಗಳ ವೀಸಾ ಮುಕ್ತ ಪ್ರವೇಶವನ್ನು ಮಲೇಷ್ಯಾ ಸರ್ಕಾರ ಕಲ್ಪಿಸಿದೆ.

ಪಿಟಿಐ
Published 27 ನವೆಂಬರ್ 2023, 6:58 IST
Last Updated 27 ನವೆಂಬರ್ 2023, 6:58 IST
<div class="paragraphs"><p> ಮಲೇಷ್ಯಾದ ಕ್ವಾಲಾಲಂಪುರದ ಬಾಟು ಗುಹೆ ಎದುರಿನ ಮುರುಗನ್ ಪ್ರತಿಮೆ­</p></div>

ಮಲೇಷ್ಯಾದ ಕ್ವಾಲಾಲಂಪುರದ ಬಾಟು ಗುಹೆ ಎದುರಿನ ಮುರುಗನ್ ಪ್ರತಿಮೆ­

   

ಕ್ವಾಲಾಲಂಪುರ: ಭಾರತೀಯ ಮತ್ತು ಚೀನಿ ಪ್ರವಾಸಿಗರಿಗೆ 30 ದಿನಗಳ ವೀಸಾ ಮುಕ್ತ ಪ್ರವೇಶವನ್ನು ಮಲೇಷ್ಯಾ ಸರ್ಕಾರ ಕಲ್ಪಿಸಿದೆ. ಡಿಸೆಂಬರ್ 1ರಿಂದ ಇದು ಜಾರಿಗೆ ಬರಲಿದೆ.

ಪ್ರವಾಸೋಧ್ಯಮ ಅಭಿವೃದ್ಧಿ ದೃಷ್ಠಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಹೇಳಿದ್ದಾರೆ.

ADVERTISEMENT

ವೀಸಾ ಮುಕ್ತವಾಗಿದ್ದರೂ ಪ್ರವಾಸಿಗರು ನಿಗದಿತ ಭದ್ರತಾ ತಪಾಸಣೆಗಳನ್ನು ಪೂರೈಸಲೇಬೇಕು ಎಂದು ಅವರು ಹೇಳಿದ್ದಾರೆ.

ಈ ಮೂಲಕ ಏಷ್ಯಾ ಖಂಡದ 8 ರಾಷ್ಟ್ರಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಮಲೇಷ್ಯಾ ಸರ್ಕಾರ ಕಲ್ಪಿಸಿದೆ.

ವಾರ್ಷಿಕವಾಗಿ ಮಲೇಷ್ಯಾ 16.1 ಮಿಲಿಯನ್‌ಗೆ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವ ಗುರಿ ಹಾಕಿಕೊಂಡಿದೆ. ಭಾರತದ ಪ್ರವಾಸಿಗರ ಸಂಖ್ಯೆಯೇ ಅಧಿಕವಿದೆ.

2022 ರಲ್ಲಿ 3,24,548 ಭಾರತೀಯರು ಮಲೇಷ್ಯಾಕ್ಕೆ ಭೇಟಿ ನೀಡಿದ್ದರು. ಪ್ರಸ್ತುತ ಭಾರತ ಮತ್ತು ಮಲೇಷ್ಯಾ ನಡುವೆ ಪ್ರತಿ ವಾರ 158 ವಿಮಾನಗಳು ಹಾರಾಟ ನಡೆಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.