ADVERTISEMENT

ಮಲೇಷ್ಯಾ: ಮೆಟ್ರೊ ರೈಲು ಡಿಕ್ಕಿಯಾಗಿ 200ಕ್ಕೂ ಹೆಚ್ಚು ಜನರಿಗೆ ಗಾಯ

ಏಜೆನ್ಸೀಸ್
Published 25 ಮೇ 2021, 11:19 IST
Last Updated 25 ಮೇ 2021, 11:19 IST
ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಸೋಮವಾರ ಎರಡು ಲಘು ರೈಲುಗಳು ಡಿಕ್ಕಿ (ಎಲ್ಆರ್‌ಟಿ) ಹೊಡೆದದ್ದರಿಂದ ಗಾಯಗೊಂಡ ಪ್ರಯಾಣಿಕರನ್ನು ಸ್ಟ್ರೆಚರ್‌ನಲ್ಲಿ ಮಲಗಿಸಿ ಚಿಕಿತ್ಸೆಗೆ ಕೊಂಡೊಯ್ಯಲಾಯಿತು– ಎಎಫ್‌ಪಿ ಚಿತ್ರ
ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಸೋಮವಾರ ಎರಡು ಲಘು ರೈಲುಗಳು ಡಿಕ್ಕಿ (ಎಲ್ಆರ್‌ಟಿ) ಹೊಡೆದದ್ದರಿಂದ ಗಾಯಗೊಂಡ ಪ್ರಯಾಣಿಕರನ್ನು ಸ್ಟ್ರೆಚರ್‌ನಲ್ಲಿ ಮಲಗಿಸಿ ಚಿಕಿತ್ಸೆಗೆ ಕೊಂಡೊಯ್ಯಲಾಯಿತು– ಎಎಫ್‌ಪಿ ಚಿತ್ರ   

ಕ್ವಾಲಾಲಂಪುರ: ಇಲ್ಲಿನ ಮೆಟ್ರೊ ರೈಲು ಸುರಂಗವೊಂದರಲ್ಲಿ ಸೋಮವಾರ ಎರಡು ಲಘು ರೈಲುಗಳು (ಎಲ್‌ಆರ್‌ಟಿ) ಡಿಕ್ಕಿ ಹೊಡೆದದ್ದರಿಂದ 200ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.

ಮಲೇಷ್ಯಾದ 23 ವರ್ಷಗಳ ಮೆಟ್ರೊ ರೈಲು ವ್ಯವಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ದೊಡ್ಡ ಅಪಘಾತ ಸಂಭವಿಸಿದೆ.

‘ವಿಶ್ವದ ಅತಿ ಎತ್ತರದ ಅವಳಿ ಗೋಪುರಗಳಾದ ಪೆಟ್ರೋನಾರ್ಸ್ ಟವರ್ಸ್ ಬಳಿಯ ಸುರಂಗದಲ್ಲಿ ಸೋಮವಾರ 213 ಪ್ರಯಾಣಿಕರನ್ನೊಳಗೊಂಡ ಮೆಟ್ರೊ ರೈಲು ಹಾಗೂ ಪರೀಕ್ಷಾರ್ಥ ಪ್ರಯಾಣದಲ್ಲಿದ್ದ ಖಾಲಿ ರೈಲು ಪರಸ್ಪರ ಡಿಕ್ಕಿಯಾಗಿವೆ. ಅಪಘಾತದ ಸಮಯದಲ್ಲಿ ಪರೀಕ್ಷಾರ್ಥ ರೈಲು ಗಂಟೆಗೆ 20 ಕಿ.ಮೀ. ಹಾಗೂ ಪ್ರಯಾಣಿಕರಿದ್ದ ರೈಲು ಗಂಟೆಗೆ 40 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದವು’ ಎಂದು ಸಾರಿಗೆ ಸಚಿವ ವೀ ಕಾ ಸಿಯಾಂಗ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.