ADVERTISEMENT

ಲಘು ವಿಮಾನ ಬಳಸಿ ಮಹಿಳೆಗೆ ಕಿರುಕುಳ! ನ್ಯೂಯಾರ್ಕ್‌ನಲ್ಲಿ ವ್ಯಕ್ತಿ ಬಂಧನ

ರೆಸ್ಟೊರಂಟ್ ಒಡತಿಗೆ ಮಾನಸಿಕ ಕಿರುಕುಳ ನೀಡಲು ಲಘು ವಿಮಾನ ಬಳಸಿ ರೆಸ್ಟೊರಂಟ್ ಮೇಲೆ ಟೊಮೆಟೊಗಳನ್ನು ಸುರಿಯುತ್ತಿದ್ದ ವ್ಯಕ್ತಿ!

ಪಿಟಿಐ
Published 9 ಫೆಬ್ರುವರಿ 2024, 3:13 IST
Last Updated 9 ಫೆಬ್ರುವರಿ 2024, 3:13 IST
<div class="paragraphs"><p>ಲಘು ವಿಮಾನ</p></div>

ಲಘು ವಿಮಾನ

   

ನ್ಯೂಯಾರ್ಕ್: ಮಹಿಳೆಯೊಬ್ಬರಿಗೆ ಮಾನಸಿಕ ಕಿರುಕುಳ ನೀಡಬೇಕು ಎಂಬ ಉದ್ದೇಶದಿಂದ ವ್ಯಕ್ತಿಯೊಬ್ಬ ಲಘು ವಿಮಾನ ಬಳಸಿ ಹುಚ್ಚಾಟ ನಡೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಚೆಲ್ ಅರ್ನಾಲ್ಡ್ (65) ಎಂಬಾತನನ್ನು ನ್ಯೂಯಾರ್ಕ್ ಹೊರವಲಯದ ಸರಟಾಗೊ ಕೌಂಟಿ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಸರಟಾಗೊ ಕೌಂಟಿಯ Schuylerville ಎಂಬ ಪ್ರದೇಶದಲ್ಲಿ ಸಂತ್ರಸ್ತ ಮಹಿಳೆ ರೆಸ್ಟೊರಂಟ್ ಒಂದನ್ನು ನಡೆಸುತ್ತಾರೆ. ಈ ಮಹಿಳೆಗೆ ಮಿಚಲ್ 2019ರಿಂದ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಿತ್ರ ಎಂದರೆ ಇತ್ತೀಚೆಗೆ ಆತ, ತನ್ನ ಬಳಿ ಇರುವ ಸಿಂಗಲ್ ಎಂಜಿನ್ ಲಘು ವಿಮಾನ ಬಳಸಿ ಮಹಿಳೆಗೆ ಕಿರುಕುಳ ಕೊಡಲು ಆರಂಭಿಸಿದ್ದಾನೆ. ಮಹಿಳೆಯ ಅಶ್ಲೀಲ ಚಿತ್ರಗಳನ್ನು ವಿಮಾನಕ್ಕೆ ಕಟ್ಟಿಕೊಂಡು ರೆಸ್ಟೊರಂಟ್ ಮೇಲೆ ಹಾರಾಟ ಮಾಡುವುದು, ರೆಸ್ಟೊರಂಟ್ ಮೇಲೆ ಟೊಮೆಟೊಗಳನ್ನು ಸುರಿಯುವುದು ಮಾಡುತ್ತಿದ್ದ. ಅಲ್ಲದೇ ವಿಮಾನ ಬಳಸಿಯೇ ಮಹಿಳೆಯನ್ನು ಹಿಂಬಾಲಿಸುತ್ತಿದ್ದ.

ಆತನ ವರ್ತನೆ ತಿಳಿದ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಸದ್ಯ ಆ ವ್ಯಕ್ತಿ ಮೇಲೆ ಪೊಲೀಸರು ಜಾಮೀನು ರಹಿತ ಪ್ರಕರಣ ದಾಖಲಿಸಿದ್ದಾರೆ.

ಇದಕ್ಕೂ ಮೊದಲು ನಾಲ್ಕು ಬಾರಿ ಆತನ ಮೇಲೆ ಪ್ರಕರಣಗಳು ದಾಖಲಾಗಿದ್ದರೂ ಜಾಮೀನಿನ ಮೇಲೆ ಹೊರಬಂದು ಪುನಃ ಆ ಮಹಿಳೆಗೆ ಕಿರುಕುಳ ಕೊಡುವುದನ್ನು ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.