ADVERTISEMENT

ವಾಷಿಂಗ್ಟನ್‌| ಭಾರತ ಮೂಲದ ಬಾಲಕಿ ಸಾವು : ಅಪರಾಧಿಗೆ 100 ವರ್ಷ ಜೈಲು

ಪಿಟಿಐ
Published 26 ಮಾರ್ಚ್ 2023, 16:15 IST
Last Updated 26 ಮಾರ್ಚ್ 2023, 16:15 IST
.
.   

ವಾಷಿಂಗ್ಟನ್‌ (ಪಿಟಿಐ): ಲೂಸಿಯಾನದಲ್ಲಿ 2021ರಲ್ಲಿ ಭಾರತ ಮೂಲದ 5 ವರ್ಷದ ಬಾಲಕಿ ಮಾಯಾ ಪಟೇಲ್‌ ಸಾವಿಗೆ ಕಾರಣವಾದ 35 ವರ್ಷದ ವ್ಯಕ್ತಿಯನ್ನು ದೂಷಿ ಎಂದು ಪರಿಗಣಿಸಿ ಇಲ್ಲಿನ ನ್ಯಾಯಾಲಯ 100 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿವೆ.

ಜೊಸೆಫ್‌ ಲೀ ಸ್ಮಿತ್‌ ಶಿಕ್ಷೆಗೆ ಒಳಗಾದ ವ್ಯಕ್ತಿ. ಶ್ರೆವೆಪೋರ್ಟ್‌ ನಗರದ ಹೊಟೆಲ್‌ವೊಂದರ ಪಾರ್ಕಿಂಗ್‌ ಜಾಗದಲ್ಲಿ ವ್ಯಕ್ತಿಯೊಬ್ಬನ ಜತೆ ಜೊಸೆಫ್‌ ವಾಗ್ವಾದ ನಡೆಸುವ ವೇಳೆ ಗನ್‌ನಿಂದ ಗುಂಡು ಹಾರಿದ್ದು, ಕೊಠಡಿಯಲ್ಲಿ ಆಟವಾಡುತ್ತಿದ್ದ ಮಾಯಾ ಪಟೇಲ್‌ಗೆ ತಗುಲಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. 3 ದಿನಗಳ ಜೀವನ್ಮರಣ ಹೋರಾಟ ನಡೆಸಿದ ಬಾಲಕಿ ಮೃತಪಟ್ಟಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT