ADVERTISEMENT

ನ್ಯೂಜಿಲೆಂಡ್ ಸೂಪರ್‌ಮಾರ್ಕೆಟ್‌ನಲ್ಲಿ ಚೂರಿ ಇರಿತ

ಏಜೆನ್ಸೀಸ್
Published 10 ಮೇ 2021, 6:54 IST
Last Updated 10 ಮೇ 2021, 6:54 IST
.
.   

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ನ ಡುನೆಡಿನ್‌ ನಗರದ ಸೂಪರ್‌ ಮಾರ್ಕೆಟ್‌ ಒಂದರಲ್ಲಿ ಸೋಮವಾರ ವ್ಯಕ್ತಿಯೊಬ್ಬ ಚೂರಿಯಿಂದ ಮನಬಂದಂತೆ ಸಾರ್ವಜನಿಕರಿಗೆ ಇರಿದ ಘಟನೆ ನಡೆಸಿದ್ದು, ಐವರು ಗಾಯಗೊಂಡಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ.

ಸೂಪರ್‌ಮಾರ್ಕೆಟ್‌ನಲ್ಲಿ ಜನ ಖರೀದಿಯಲ್ಲಿ ತೊಡಗಿದ್ದಾಗ ವ್ಯಕ್ತಿ ಚೂರಿ ಇರಿತ ಆರಂಭಿಸಿದ. ಜನರು ಕಂಗೆಟ್ಟು, ಅರಚುತ್ತ ಹೊರ ಹೋಗಲು ಪ್ರಯತ್ನಿಸಿದರು. ಗ್ರಾಹಕರಲ್ಲೇ ಕೆಲವು ಧೈರ್ಯಶಾಲಿಗಳು ಆರೋಪಿಯನ್ನು ಹಿಡಿಯುವಲ್ಲಿ ಸಫಲರಾದರು.

‘ದಾಳಿಯ ಹಿಂದಿನ ಉದ್ದೇಶ ಇನ್ನೂ ಖಚಿತವಾಗಿಲ್ಲ, ಇದೊಂದು ದೇಶೀಯ ಭಯೋತ್ಪಾದನೆ ಕೃತ್ಯ ಎಂದು ಹೇಳುವುದಕ್ಕೆ ಸದ್ಯ ಯಾವುದೇ ಸಾಕ್ಷ್ಯ ದೊರೆತಿಲ್ಲ’ ಎಂದು ಪ್ರಧಾನಿ ಜೆಸಿಂಡಾ ಆರ್ಡೆರ್ನ್‌ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.