ADVERTISEMENT

Nepal Helicopter Crash | ನೇಪಾಳ: ಹೆಲಿಕಾಪ್ಟರ್ ಪತನ; ಆರು ಮಂದಿ ಸಾವು

ಪಿಟಿಐ
Published 11 ಜುಲೈ 2023, 9:15 IST
Last Updated 11 ಜುಲೈ 2023, 9:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಠ್ಮಂಡು: ಹಿಮಾಲಯದ ಮೌಂಟ್‌ ಎವರೆಸ್ಟ್‌ ಶಿಖರದ ಬಳಿ ಖಾಸಗಿ ಹೆಲಿಕಾಪ್ಟರ್ ಪತನಗೊಂಡಿದ್ದು, ಮೆಕ್ಸಿಕೊದ ಕುಟುಂಬವೊಂದರ ಐವರು ಸದಸ್ಯರು ಸೇರಿದಂತೆ ಒಟ್ಟು ಆರು ಜನರು ಮೃತಪಟ್ಟಿದ್ದಾರೆ.


ನೇಪಾಳದ ಸೊಲುಖುಂಬು ಜಿಲ್ಲೆಯ ಸುರ್ಕೆ ವಿಮಾನನಿಲ್ದಾಣದಿಂದ ಮನಂಗ್‌ ಏರ್‌ ಎನ್‌ಎ–ಎಂವಿ ಹೆಲಿಕಾಪ್ಟರ್‌ ಬೆಳಿಗ್ಗೆ 10.04ಕ್ಕೆ ಹೊರಟಿತ್ತು. ಇದಾದ ಸ್ವಲ್ಪ ಸಮಯದಲ್ಲೇ ಸಂಪರ್ಕ ಕಡಿದುಕೊಂಡಿತು ಎಂದು ತ್ರಿಭುವನ್‌ ಅಂತರರಾಷ್ಟ್ರೀಯ ವಿಮಾನನಿಲ್ದಾಣದ (ಟಿಐಎ) ವ್ಯವಸ್ಥಾಪಕ ಜ್ಞಾನೇಂದ್ರ ತಿಳಿಸಿದರು.


ಪರ್ವತ ಶ್ರೇಣಿಯ ಲಂಜುರಾ ವಲಯದಲ್ಲಿ ಹೆಲಿಕಾಪ್ಟರ್‌ ಪತನಗೊಂಡಿದೆ. ಎಲ್ಲರೂ ಸ್ಥಳದಲ್ಲೇ ಸತ್ತಿದ್ದು, ಶವಗಳು ಪತ್ತೆಯಾಗಿವೆ. ನತದೃಷ್ಟರು ಪರ್ವತ ವೀಕ್ಷಣೆಯ ಬಳಿಕ ಕಠ್ಮಂಡುವಿಗೆ ಮರಳುವಾಗ ಅವಘಢ ಸಂಭವಿಸಿದೆ ಎಂದು ಟಿಐಎ ವಕ್ತಾರ ಏಕನಾಥ್ ಸಿತೌಲಾ ಪ್ರತಿಕ್ರಿಯಿಸಿದರು.

ADVERTISEMENT


ಕ್ಯಾಪ್ಟನ್‌ ಚೆತ್ ಬಹಾದ್ದೂರ್ ಗುರುಂಗ್ ಹಾಗೂ ಮೆಕ್ಸಿಕೊದ ಕುಟುಂಬವೊಂದರ ಐದು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.