ADVERTISEMENT

ಮಡಗಾಸ್ಕರ್‌ನಲ್ಲಿ ವಲಸಿಗರ ದೋಣಿ ಮುಳುಗಿ 22 ಜನ ಸಾವು

ಐಎಎನ್ಎಸ್
Published 13 ಮಾರ್ಚ್ 2023, 7:08 IST
Last Updated 13 ಮಾರ್ಚ್ 2023, 7:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಂಟಾನಾನರಿವೊ: ವಲಸಿಗರು ಇದ್ದ ದೋಣಿ ಮುಳುಗಿ ಕನಿಷ್ಠ 22 ಮಂದಿ ಮೃತಪಟ್ಟಿರುವ ಘಟನೆ ಮಡಗಾಸ್ಕರ್ ಕರಾವಳಿಯ ಸಮುದ್ರದಲ್ಲಿ ಸಂಭವಿಸಿದೆ ಎಂದು ಪೂರ್ವ ಆಫ್ರಿಕಾ ರಾಷ್ಟ್ರದ ಬಂದರು ಪ್ರಾಧಿಕಾರ ತಿಳಿಸಿದೆ.

47 ಜನರು ಪ್ರಯಾಣಿಸುತ್ತಿದ್ದ ದೋಣಿ ಶನಿವಾರ ಮುಳುಗಿದೆ ಎಂದು ಮೆರಿಟೈಮ್ ಮತ್ತು ರಿವರ್ ಪೋರ್ಟ್ ಏಜೆನ್ಸಿ ಭಾನುವಾರ ತಡರಾತ್ರಿ ಹೇಳಿದೆ.

ದೋಣಿಯಲ್ಲಿದ್ದ 23 ಮಂದಿಯನ್ನು ರಕ್ಷಿಸಲಾಗಿದೆ. ಕಾಣೆಯಾದವರಿಗಾಗಿ ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ದೋಣಿಯು ಫ್ರೆಂಚ್ ಸಾಗರೋತ್ತರ ದ್ವೀಪವಾದ ಮಯೊಟ್ಟೆಗೆ ತೆರಳುತ್ತಿತ್ತು ಎಂದು ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.