ADVERTISEMENT

ಚೀನಾ: 13 ಸಾವಿರ ಕಲಾಕೃತಿ ಸಂಗ್ರಹದ ನಿಧಿ ಪತ್ತೆ

ಪಿಟಿಐ
Published 15 ಜೂನ್ 2022, 3:58 IST
Last Updated 15 ಜೂನ್ 2022, 3:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೀಜಿಂಗ್: ಚೀನಾದ ಪುರಾತತ್ವ ಶಾಸ್ತ್ರಜ್ಞರು ಸುಮಾರು 13,000 ಕಲಾಕೃತಿಗಳ ಪುರಾತನ ನಿಧಿ ಪತ್ತೆ ಹಚ್ಚಿದ್ದು, ಇದು 3,000 ದಿಂದ 4,500 ವರ್ಷಗಳಷ್ಟು ಹಿಂದಿನ ನಿಗೂಢ ಸಾಮ್ರಜ್ಯವೆಂದು ಹೇಳಲಾಗಿದೆ.

ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಪತ್ತೆಯಾದಕನಿಷ್ಠ ಹತ್ತು ಕಂಚಿನ ಸಾಮಾನು ಒಳಗೊಂಡಂತೆ ಸೊಗಸಾದ ಕಂಚು, ಚಿನ್ನ ಮತ್ತು ‍ಪಚ್ಚೆಹರಳು ಸಾಮಾನುಗಳು ಪುರಾತತ್ವ ಶಾಸ್ತ್ರಜ್ಞರನ್ನು ಬೆರಗುಗೊಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮೊದಲಿಗೆ ಇದನ್ನು 1920ರ ದಶಕದ ಅಂತ್ಯದಲ್ಲಿ ಪತ್ತೆಹಚ್ಚಲಾಗಿತ್ತು.ಅವಶೇಷಗಳನ್ನು 20ನೇ ಶತಮಾನದ ವಿಶ್ವದ ಶ್ರೇಷ್ಠ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳಲ್ಲಿ ಒಂದು ಎಂದು ಹೆಸರಿಸಲಾಗಿದೆ.

ADVERTISEMENT

ಹೊಂಡಗಳ ಸುತ್ತಲೂ ಬೂದಿ ಕಂದಕಗಳು, ವಾಸ್ತುಶಿಲ್ಪದ ಅಡಿಪಾಯಗಳು, ಸಾಂಸ್ಕೃತಿಕ ಅವಶೇಷಗಳು, ಬಿದಿರುಗಳನ್ನು ಪುರಾತತ್ವ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.