ADVERTISEMENT

ಪಿಎನ್‌ಬಿ ವಂಚನೆ ಪ್ರಕರಣ: ಬೆಲ್ಜಿಯಂನಲ್ಲಿ ಆರೋಪಿ ಮೆಹುಲ್ ಚೋಕ್ಸಿ ಬಂಧನ

ಏಜೆನ್ಸೀಸ್
Published 14 ಏಪ್ರಿಲ್ 2025, 2:54 IST
Last Updated 14 ಏಪ್ರಿಲ್ 2025, 2:54 IST
<div class="paragraphs"><p>ಮೆಹುಲ್ ಚೋಕ್ಸಿ</p></div>

ಮೆಹುಲ್ ಚೋಕ್ಸಿ

   

ಚಿತ್ರ: ಎಕ್ಸ್‌

ಬ್ರಸೆಲ್ಸ್: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ADVERTISEMENT

ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ನಿಂದ ₹13,850 ಕೋಟಿ ಸಾಲ ಪಡೆದಿದ್ದ ವಜ್ರದ ವ್ಯಾಪಾರಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ, ಸಾಲ ಮರುಪಾವತಿಸದೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದರು. ಇವರಿಬ್ಬರಿಗಾಗಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಹುಡುಕಾಟ ನಡೆಸುತ್ತಿದೆ.

ಭಾರತ ಸರ್ಕಾರದ ಕೋರಿಕೆಯ ಮೇರೆಗೆ ಚೋಕ್ಸಿ ಅವರನ್ನು ಬೆಲ್ಜಿಯಂನಲ್ಲಿ ಶನಿವಾರ ಬಂಧಿಸಲಾಗಿದೆ. ಸದ್ಯ ಚೋಕ್ಸಿ ಜೈಲಿನಲ್ಲಿದ್ದಾರೆ ಎಂದು ತಿಳಿದುಬಂದಿದೆ.

2018ರಲ್ಲಿ ದೇಶದಿಂದ ಪರಾರಿಯಾಗಿದ್ದ ಚೋಕ್ಸಿ, ಆರಂಭದಲ್ಲಿ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸಿಸುತ್ತಿದ್ದರು ಎಂದು ಹೇಳಾಗುತ್ತಿತ್ತು. ಆದರೆ, ಇತ್ತೀಚೆಗೆ ಅವರು ಬೆಲ್ಜಿಯಂನ ಆಂಟ್ವೆರ್ಪ್‌ನಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಸಿಬಿಐ ಬೆಲ್ಜಿಯಂ ಸರ್ಕಾರಕ್ಕೆ ಮನವಿ ಮಾಡಿತ್ತು.

ಸದ್ಯ ಲಂಡನ್‌ ಜೈಲಿನಲ್ಲಿರುವ ನೀರವ್ ಮೋದಿ ವಿರುದ್ಧ ಗಡೀಪಾರು ಪ್ರಕ್ರಿಯೆಗಳು ನಡೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.