
ಪಿಟಿಐ
ಲಾಹೋರ್: ಪಾಕಿಸ್ತಾನದಲ್ಲಿ ಬಿಸಿಗಾಳಿಯ ತೀವ್ರತೆ ಹೆಚ್ಚಾಗಿದ್ದು, ಸಿಂಧ್ ಪ್ರಾಂತ್ಯದ ಮೊಹೆಂಜೊದಾರೊ ಮತ್ತು ದಾದು ಪ್ರದೇಶದಲ್ಲಿ 50 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇತರ ಹಲವು ನಗರಗಳಲ್ಲಿ 46 ಡಿಗ್ರಿಗಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಇದು ಈ ಬೇಸಿಗೆಯಲ್ಲಿ ಅತ್ಯಂತ ಬಿಸಿಯಾದ ದಿನ ಎಂದು ಪಾಕಿಸ್ತಾನ ಹವಾಮಾನ ಇಲಾಖೆ ಹೇಳಿದೆ.
ಬಿಸಿಲಿನ ತಾಪಮಾನ ಹೆಚ್ಚಿರುವ ಕಾರಣ ಜನರಿಗೆ ಮನೆಯೊಳಗೆ ಇರುವಂತೆಯೂ, ಅನಗತ್ಯವಾಗಿ ಹೊರಗಡೆ ಓಡಾಡದಂತೆಯೂ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ತಾಪಮಾನದ ಹೆಚ್ಚಳದಿಂದ ನೂರಕ್ಕೂ ಹೆಚ್ಚು ಜನರು ಬಿಸಿಲಾಘಾತಕ್ಕೆ (ಹೀಟ್ ಸ್ಟ್ರೋಕ್) ಒಳಗಾಗಿ ಚಿಕಿತ್ಸೆ ಪಡೆದಿದ್ದಾರೆ. ದೇಶದಲ್ಲಿ ಮುಂದಿನ ಒಂದು ವಾರದವರೆಗೆ ಬಿಸಿಲಿನ ಝಳ ಹೀಗೆಯೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.