ADVERTISEMENT

ಯೆಮೆನ್ ಬಳಿ ಮುಳುಗಿದ 4 ದೋಣಿ: ಇಬ್ಬರು ಸಾವು, 186 ನಾಪತ್ತೆ

ಏಜೆನ್ಸೀಸ್
Published 8 ಮಾರ್ಚ್ 2025, 1:22 IST
Last Updated 8 ಮಾರ್ಚ್ 2025, 1:22 IST
–
   

ಕೈರೊ: ಆಫ್ರಿಕಾದಿಂದ ವಲಸಿಗರನ್ನು ಕರೆದೊಯ್ಯುತ್ತಿದ್ದ ನಾಲ್ಕು ದೋಣಿಗಳು ಯೆಮೆನ್‌ ಮತ್ತು ದಿಬೌತಿ ಬಳಿಯ ಸಾಗರದಲ್ಲಿ ಮುಳುಗಿದ ಪರಿಣಾಮ, ಕನಿಷ್ಠ ಇಬ್ಬರು ಮೃತಪಟ್ಟು, ಇತರ 186 ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಎರಡು ದೋಣಿಗಳು ಗುರುವಾರ ರಾತ್ರಿ ಯಮೆನ್‌ ಬಳಿ ಸಾಗರದಲ್ಲಿ ಮುಳುಗಿದವು. ದೋಣಿಯ ಇಬ್ಬರು ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಆದರೆ, ಯೆಮೆನ್‌ ಮೂಲದ ಐವರು ಸಿಬ್ಬಂದಿ ಹಾಗೂ 181 ವಲಸಿಗರು ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸೆ ಸಂಘಟನೆ (ಐಒಎಂ) ವಕ್ತಾರ ತಮೀಮ್ ಎಲೆಯನ್ ತಿಳಿಸಿದ್ದಾರೆ.

ಇತರ ಎರಡು ದೋಣಿಗಳು ದಿಬೌತಿ ಬಳಿ ಮುಳುಗಿ, ಇಬ್ಬರು ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ ಎಂದೂ ತಿಳಿಸಿದ್ಧಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.